ಮೊಗರ್ಪಣೆ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬ ಆಚರಣೆ

0

ಇಸ್ಲಾಮಿನ ಆದರ್ಶ ತತ್ವವನ್ನು ಪಾಲಿಸಿಕೊಂಡು ಜೀವಿಸಿದರೆ ಪ್ರತಿಯೊಬ್ಬ ಮುಸಲ್ಮಾನರಿಗೂ ಸ್ವರ್ಗ ಪ್ರಾಪ್ತಿ ಸಾಧ್ಯ

ಮೊಗರ್ಪಣೆ ಜುಮಾ ಮಸೀದಿಯಲ್ಲಿ ಮುಸಲ್ಮಾನ ಬಾಂಧವರ ಪವಿತ್ರ ರಂಜಾನ್ ತಿಂಗಳ ಅಂತ್ಯದ ಈದುಲ್ ಫಿತರ್ ಹಬ್ಬ ಆಚರಣೆ ಇಂದು ನಡೆಯಿತು.


ಸ್ಥಳೀಯ ಮುದುರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಈದ್ ಸಂದೇಶವನ್ನು ನುಡಿದು ಪ್ರತಿಯೊಬ್ಬ ಮುಸಲ್ಮಾನರು ಇಸ್ಲಾಮಿನ ಆದರ್ಶ ತತ್ವವನ್ನು ಪಾಲಿಸಿ ಜೀವಿಸಿದರೆ ಸ್ವರ್ಗ ಪ್ರಾಪ್ತಿ ಸಾಧ್ಯ ಎಂದು ಹೇಳಿದರು. ಸ್ಥಳೀಯ 500ಕ್ಕೂ ಹೆಚ್ಚು ಮುಸಲ್ಮಾನ ಬಾಂಧವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.