ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ಯಲ್ಲಿ ಸಂಭ್ರಮದ ಈದ್ ಅಲ್-ಫಿತ್ರ್ ಆಚರಣೆ ಇಂದು ಬೆಳಿಗ್ಗೆ ನಡೆಯಿತು.
ಪ್ರಾರ್ಥನೆಗೆ ನೇತೃತ್ವ ವಹಿಸಿದ ಖತೀಬರು ಶಾಂತಿಯ ಮತ್ತು ಪರಸ್ಪರ ಸಹಬಾಳ್ವೆಯ ಸಂದೇಶ ಸಾರಿದರು. ಮೂರು ವರ್ಷಗಳ ಕಾಲ ಕಳಂಜದಲ್ಲಿ ಸೇವೆ ಸಲ್ಲಿಸಿದ ಸದ್ರ್ ಮುನೀರ್ ಉಸ್ತಾದರಿಗೆ ಬೀಳ್ಕೊಡುಗೆ ಮಾಡಲಾಯಿತು. ಸಮಾಜ ಬಾಂಧವರು ಪರಸ್ಪರ ಆಲಿಂಗನದೊಂದಿಗೆ ಈದ್ ನ ಸಂಭ್ರಮದ ಶುಭಾಶಯ ಹಂಚಿಕೊಂಡರು.