ರಂಜಾನ್ ತಿಂಗಳಲ್ಲಿ ಯುವಸಮಾಜ ಮಾಡಿದ ಸೇವೆ ಶ್ಲಾಘನೀಯ : ಖಾಮಿಲ್ ಸಖಾಫಿ
ಪವಿತ್ರ ರಂಝಾನ್ ಒಂದು ತಿಂಗಳು ಉಪವಾಸ ವೃತ ಆಚರಿಸಿ ವಿಶ್ವದಾದ್ಯಂತ ಮುಸಲ್ಮಾನರು ಶವ್ವಾಲ್ ಒಂದು ಈದ್ ನಮಾಜ್ ನೊಂದಿಗೆ ಈದುಲ್ ಫಿತರ್ ಹಬ್ಬವನ್ನು ಆಚರಿಸಿದರು.
ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ಈದ್ ನಮಾಜ್ ನೇತೃತ್ವ ವಹಿಸಿ ಕುತುಬ ಹಾಗೂ ಈದ್ ಸಂದೇಶ ಸಾರಿದರು.
ಇಸ್ಲಾಂ ಕಲಿಸಿದ ಮಾರ್ಗದರ್ಶನವನ್ನು ಅನುಸರಿಸಿ ಪವಿತ್ರ ರಂಜಾನ್ ತಿಂಗಳಲ್ಲಿ ಹಲವಾರು ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡಿ ಅಲ್ಲಾಹನ ಸಂಪ್ರೀತಿಗಳಿಸಿ ಮಸೀದಿಗಳಲ್ಲಿ ಇಪ್ತಾರ್ ಕೂಟವನ್ನು ಏರ್ಪಡಿಸಿ ಅಶಸಕ್ತರಿಗೆ ಕಿಟ್ ಇನ್ನಿತರ ಸಹಾಯಹಸ್ತವನ್ನು ನೀಡಿ,ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸಿ ಎಲ್ಲಾ ರೀತಿಯಲ್ಲೂ ಈ ರಂಜಾನ್ ನಲ್ಲಿ ಈ ನಾಡಿನ ಯುವ ಸಮುದಾಯ ಮಾಡಿದ ಸೇವೆ ಶ್ಲಾಘನೀಯ ಎಂದು ಹೇಳುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ವಿಶೇಷವಾಗಿ ಪಾರ್ಥಿಸಿದರು.
ಇಸ್ಲಾಂ ಕಲಿಸಿದ ಜೀವನ ಶೈಲಿಯನ್ನು ಮೈಗೂಡಿಸಿಕೊಂಡುಜೀವನ ನಡೆಸಿದರೆ ಅಲ್ಲಾಹನ ಸಂತೃಪ್ತಿ ಸಿಗುವುದರೊಂದಿಗೆ ಯಶಸ್ವಿ ಜೀವನ ನಡೆಸಲು ಸಾದ್ಯ ಎಂದು ಈದ್ ಸಂದೇಶದಲ್ಲಿ ಹೇಳಿದರು.
ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಐ ಇಸ್ಮಾಯಿಲ್,ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್,ಸಿದ್ದೀಕ್ ಕೊಕ್ಕೊ, ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಸುಳ್ಯ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಗ್ರೀನ್ ವ್ಯೂ ಸಂಚಾಲಕ ಹಾಜಿ ಎಸ್ ಎಂ ಅಬ್ದುಲ್ ಹಮೀದ್ ,ಎಸ್ ಎಂ ಎ ಅಧ್ಯಕ್ಷ ಹಮೀದ್ ಬೀಜಕೊಚ್ಚಿ, ಹಾಗೂ ಜಮಾಯತರು ಭಾಗವಹಿಸಿದರು.
ಜುಮ್ಮಾ ಕುತುಬ ಮತ್ತು ಈದ್ ನಮಾಜ್ ನಂತರ ಪರಸ್ಪರ ಹಸ್ತಲಾಘವ ಮಾಡಿದರು.