ಸಂಪಾಜೆ : ಸಂಭ್ರಮದ ಈದುಲ್‌ ಫಿತ್ರ್ ಆಚರಣೆ

0

ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ “ಈದ್ ಉಲ್ ಫಿತ್ರ್ ” ಅಲ್ ಇಸ್ಲಾಹ್ ಸಲಫಿ ಜುಮಾ ಮಸ್ಜಿದ್ ಸಂಪಾಜೆಯಲ್ಲಿ ಸಂಭ್ರಮ- ಸಡಗರದಿಂದ ಆಚರಿಸಲಾಯಿತು.

ಒಂದು ತಿಂಗಳುಗಳ ಕಾಲ ಪವಿತ್ರ ರಮ್ಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ಮಂಗಳವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ 29 ಉಪವಾಸದೊಂದಿಗೆ ಈ ವರ್ಷದ ರಂಜಾನ್ ತಿಂಗಳು ಅಂತ್ಯಗೊಳಿಸಿ ಇಂದು ಹಬ್ಬ ಆಚರಿಸಲಾಗಿದೆ.

ಹಬ್ಬದ ಪ್ರಯುಕ್ತ ಮುಸ್ಲಿಮರಿಂದ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ ನಮಾಝ್ ನಡೆಯಿತು. ನಮಾಝ್ ಬಳಿಕ ಮಾತನಾಡಿದ ಖತೀಬರಾದ ಮೌಲವಿ ಶಮೀರ್ ಮೆಹಬೂಬ್ ಕೊಡಗು ಈದ್ ಸಂದೇಶ ಪ್ರಭಾಷಣ ಮಾಡಿ ಮಾತನಾಡಿದರು.

ಆ ಬಳಿಕ ಎಲ್ಲರೂ ಪರಸ್ಪರ ಹಸ್ತಲಾಘವ ನಡೆಸಿ ಪರಸ್ಪರ ಆಲಿಂಗನ ಮಾಡಿ ಹಬ್ಬದ ಶುಭಾಶಯ ಹೇಳಿ ಸಂಭ್ರಮದಿಂದ ಈದ್ ಆಚರಿಸಲಾಯಿತು.