ಪಿಯುಸಿ : ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಶೇ.96.46 ಫಲಿತಾಂಶ

0

ವಿಜ್ಞಾನ ವಿಭಾಗದಲ್ಲಿ ಶೇ.100

ತಾಲೂಕಿನಲ್ಲಿ ಅತೀ ಹೆಚ್ಚು‌ ವಿದ್ಯಾರ್ಥಿಗಳನ್ನು ಪಡೆದಿರುವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ‌ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದೊಂದಿಗೆ ಸಂಸ್ಥೆಯು ಶೇ.96.46 ಫಲಿತಾಂಶ ದಾಖಲಿಸಿದೆ.

ಕಲಾ ವಿಭಾಗದಿಂದ 117 ಮಂದಿ ಪರೀಕ್ಷೆ ಬರೆದು 110 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ. 94 ಫಲಿತಾಂಶ ಬಂದಿದೆ. 12 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 122 ವಿದ್ಯಾರ್ಥಿಗಳಲ್ಲಿ 118ಮಂದಿ ಪಾಸಾಗಿ ಶೇ.96.7 ಫಲಿತಾಂಶ ಬಂದಿದೆ. 28 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 72 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿ ಶೇ.100 ಫಲಿತಾಂಶ ಬಂದಿದೆ. 22 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.