ಸುಳ್ಳು ಹೇಳುವ ಸರಕಾರವನ್ನು ಬದಲಾವಣೆ ಮಾಡಬೇಕು

0

ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮತ್ತು ಕೊಟ್ಟ ಭರವಸೆಯನ್ನು ಈಡೇರಿಸುವ ಸರಕಾರ ಬರಬೇಕು : ಅಮರ ಸುಳ್ಯ ನಾಗರಿಕ ವೇದಿಕೆ

ಈಗಾಗಲೇ ಚುನಾವಣೆ ದಿನ ನಿಗದಿಯಾಗಿದೆ ಯೋಚಿಸಿ, ಆಲೋಚಿಸಿ ಮತಚಲಾಯಿಸಿ ಸುಳ್ಳು ಹೇಳುವ ಸರಕಾರವನ್ನು ಈ ಬಾರಿ ಬದಲಾವಣೆ ಮಾಡಬೇಕು, ಪ್ರಸ್ತುತ ಆಡಳಿತ ನಡೆಸುವ ಕೇಂದ್ರ ಸರ್ಕಾರ ನುಡಿದಂತೆ ನಡೆದು ಸಮಾಜಕ್ಕೆ ಮಾದರಿಯಾಗುವುದು ಬಿಟ್ಟು ಅನೇಕ ಸುಳ್ಳುಗಳನ್ನು ಹೇಳಿ ಸಮಾಜದ ಮೇಲೆ ಕೆಟ್ಟಪರಿಣಾಮ ಬೀರುವಂತೆ ನಡೆದುಕೊಂಡಿದ್ದು ಸುಸಂಸ್ಕೃತ ಸಮಾಜವನ್ನು ಬಯಸುವವರಿಗೆ ಇದು ಅರಗಿಸಿಕೊಳ್ಳುವುದು ಕಷ್ಟ ಸಾಧ್ಯ ವಾಗಿದೆ.


ಈ ಬಾರಿ ಮತದಾನ ಮಾಡುವುದಕ್ಕಿಂತ ಅಲೋಚಿಸಿ ಮತದಾನ ಚಲಾಯಿಸಿ ಎಂದು ಅಮರ ಸುಳ್ಯ ನಾಗರೀಕ ವೇದಿಕೆ ವತಿಯಿಂದ ಗೋಪಾಲ ಪೆರಾಜೆ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ವಿದೇಶದಲ್ಲಿರುವ ಕಪ್ಪು ಹಣವನ್ನು ನೂರು ದಿನಗಳಲ್ಲಿ ತರುತ್ತೇವೆ ಎಂದು ಸುಳ್ಯ ಹೇಳಿ ಓಟು ಪಡೆದು ಈಗ ಕಪ್ಪು ಹಣ ಸ್ವೀಝ್ ಬ್ಯಾಂಕ್ ನಲ್ಲಿ ಹೆಚ್ಚಾಗಿದೆ, ಗೋಮಾಂಸ ರಪ್ತು ನಿಷೇಧ ಮಾಡುತ್ತೆವೆಂದು ಹೇಳಿ ಅಧಿಕಾರಕ್ಕೇರಿ ಇದೀಗ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿ ಭಾರತ ಈಗ ಎರಡನೇ ಸ್ಥಾನಕ್ಕೇರಿದೆ. ಗ್ಯಾಸ್ ದರ ೪೦೦ ರೂ. ಇದ್ದದು ೧೨೦೦ ಗೆ ತಲುಪಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆ ನೀಡಿ ಯುವಕರನ್ನು ವಂಚಿಸಿದ್ದಾರೆ. ಹೀಗೆ ಸುಳ್ಳು ಹೇಳಿ ಜನರನ್ನು ಮೋಸಮಾಡುವ ಸರಕಾರವನ್ನು ಬದಲಿಸಬೇಕು ಎಂದವರು ಹೇಳಿದರು.
ಗೋಷ್ಠಿಯಲ್ಲಿ ದಿವಾಕರ ಪೈ, ಭರತ್ ಕುಕ್ಕುಜಡ್ಕ, ಪ್ರಮೀಳಾ ಪೆಲ್ತಡ್ಕ ,ಮಂಜುನಾಥ ಐವರ್ನಾಡು ಉಪಸ್ಥಿತರಿದ್ದರು.