ಮತದಾನ ಜಾಗೃತಿ ಕುರಿತು ಪ್ರಮಾಣವಚನ ಸ್ವೀಕಾರ
ಆರಂತೋಡು ಗ್ರಾಮ ಪಂಚಾಯತಿ, ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತದಾನದ ಕುರಿತು ಜಾಗೃತಿ ಕಾಲ್ನಡಿಗೆ ಜಾಥಾವು ಎ.12ರಂದು ಅರಂತೋಡು ಪೇಟೆಯಲ್ಲಿ ನಡೆಯಿತು.
ಅರಂತೋಡು ಗ್ರಾ.ಪಂ.ಅಭಿವೃದ್ಧಿ
ಅಧಿಕಾರಿ ಜಯಪ್ರಕಾಶ್ ಎಂ. ಆರ್. ಸ್ವಾಗತಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ್ ಅವರು ಮತದಾನದ ಜಾಗೃತಿಯ ಕುರಿತು ಮಾತನಾಡಿ ಮತದಾನ ಜಾಗೃತಿಯ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಕೇಶವ ಅಡ್ತಲೆ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನ್ನೂರು, ಚುನಾವಣಾ ಸೆಕ್ಟರ್ ಅಧಿಕಾರಿಗಳಾದ ಕಿಶೋರ್ ಕುಮಾರ್ ಕಿರ್ಲಾಯ, ಪಂಚಾಯತ್ ಸದಸ್ಯರಾದ ಶ್ರೀಮತಿ ಮಾಲಿನಿ ವಿನೋದ್ ಉಳುವಾರು, ಪುಷ್ಪರಾಜ್ ಕೊಡಂಕೇರಿ, ವೆಂಕಟರಮಣ ಪೆತ್ತಾಜೆ, ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಪದ್ಮ ಕುಮಾರ್, ಭವ್ಯರಾಜ್, ಅರಂತೋಡು -ತೊಡಿಕಾನ ಸಹಕಾರಿ ಸಂಘದ ನಿರ್ದೇಶಕ ಕುಸುಮಾಧರ ಅಡ್ಕಬಳೆ, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಪಂಚಾಯಿತಿನ ಸಿಬ್ಬಂದಿ ವರ್ಗ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮದ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಕಾರ್ಯಕರ್ತರು, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಊರ ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.