ಸುಳ್ಯ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಕಾಮಗಾರಿಯಿಂದ ಹಳೆ ಪೈಪ್ ಲೈನ್ ಒಡೆದಿರುವುದಿಂದ ನೀರು ಸರಬರಾಜಿಗೆ ಸಮಸ್ಯೆಯಾಗಿದ್ದು, ಬೂಡು ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ಪೈಪ್ ಒಡೆದಿರುವ ಜಾಗದಲ್ಲಿ ನಿಂತು ಕೆಲಸ ಮಾಡಿಸುತ್ತಿದ್ದಾರೆ.
ಕೆ.ವಿ.ಜಿ. ಪುರಭವನದ ಎದುರಿನ ರಸ್ತೆಯಲ್ಲಿ ಮೂರು ದಿನಗಳಿಂದ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಹಳೆ ಪೈಪ್ ಒಡೆದು ನೀರೆಲ್ಲ ರಸ್ತೆಯಲ್ಲಿ ಹರಿದ ಪರಿಣಾಮ ವಾರ್ಡ್ ನ ಮನೆಗಳಿಗೆ ನೀರು ಹೋಗುತಿಲ್ಲ. ಇದರಿಂದ ಜನರಿಗೆ ನೀರಿನ ಸಮಸ್ಯೆಯಾಗಿದೆ. ಮೂರು ದಿನಗಳಿಂದ ಒಡೆದ ಪೈಪ್ ರಿಪೇರಿ ಮಾಡಿದರೂ ಅದು ಸಮರ್ಪಕವಾಗಿಲ್ಲ. ಇಂದು ಬೂಡು ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ಸ್ಥಳದಲ್ಲಿ ನಿಂತು ಕೆಲಸ ಮಾಡಿಸುತ್ತಿದ್ದಾರೆ.
ಈ ನಡುವೆ ಬೂಡು ವಾರ್ಡ್ ನಲ್ಲಿ ಕೊಳವೆ ಬಾವಿ ಕೊರೆಸಬೇಕೆಂದು ರಿಯಾಜ್ ಕಟ್ಟೆಕಾರ್ ಸುಳ್ಯನ.ಪಂ. ಆಡಳಿತಾಧಿಕಾರಿ ಮಂಜುನಾಥ್ ಹಾಗೂ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.