ನಿಂತಿಕಲ್ಲಿನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಶಾಖೆ ಶುಭಾರಂಭ

0

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಶಾಖೆ ನಿಂತಿಕಲ್ಲಿನ ಬಿ.ಕೆ. ಸಂಕೀರ್ಣದಲ್ಲಿ ಇಂದು (ಎ. 15ರಂದು) ಶುಭಾರಂಭಗೊಂಡಿತು.
ಗ್ರಾಮಜನ್ಯ ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮೂಲಚಂದ್ರ ಕೆ ಸಭಾಧ್ಯಕ್ಷತೆ ವಹಿಸಿದ್ದರು. ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು ಪ್ರಗತಿಪರ ಕೃಷಿಕ ಡಾ. ಪಿ. ರಾಮಚಂದ್ರ ಭಟ್, ಕಟ್ಟಡ ಮಾಲಕರಾದ ಬಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತಿಮ್ಮಯ್ಯ ಮಾದೇಟಿರ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಸ್ವಾಗತಿಸಿ, ಸಂಸ್ಥೆಯ ವ್ಯವಸ್ಥಾಪಕ ಶಶಿಧರ ರಾವ್ ವಂದಿಸಿದರು. ನಿರ್ದೇಶಕ ರಾಮ್ ಪ್ರತೀಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಬ್ಬಂದಿ ಪವನ್ ಎ.ಎಸ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ರಚನ್ ಎಸ್, ನವೀನ್ ಯು, ಪವನ್ ಎ, ಸಚಿನ್, ವಾಣಿಶ್ರೀ ಹೆಚ್ ಸಹಕರಿಸಿದರು.

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯಲ್ಲಿ 12 ಪ್ಯಾರಾಮೀಟರ್ ಮೂಲಕ ಮಣ್ಣು ಪರೀಕ್ಷೆ, ಮಣ್ಣಿನ ಗುಣಕ್ಕೆ ಅನುಗುಣವಾದ ಸಾವಯವ ಗೊಬ್ಬರ ಪೂರೈಕೆ, ಜೇನು ಕೃಷಿಗೆ ಬೇಕಾದ ಪೆಟ್ಟಿಗೆ ಇತ್ಯಾದಿ ಪೂರಕ ಪರಿಕರಗಳು, ಜೇನು ತುಪ್ಪ ಮಾಡಿ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳು ಗ್ರಾಮಜನ್ಯ ಸಂಸ್ಥೆಯಲ್ಲಿ ಲಭ್ಯವಿರಲಿದೆ.