ಆಲೆಟ್ಟಿ ಗ್ರಾಮದ ನಾಗಪಟ್ಟಣದಲ್ಲಿ ಜತ್ತಪ್ಪ ಗೌಡ ಕಾಂಪ್ಲೆಕ್ಸ್ ನಲ್ಲಿ ಗೋಪಾಲಕೃಷ್ಣ ಮೊರಂಗಲ್ಲು ರವರ ಮಾಲಕತ್ವದ ಶ್ರೀ ಭಗವತಿ ಆಯಿಲ್ ಮತ್ತು ಫ್ಲೋರ್ ಮಿಲ್ ಎ.15 ರಂದು ಶುಭಾರಂಭಗೊಂಡಿತು.
ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಸ್ಥಾನಿಕರು ದೀಪ ಪ್ರಜ್ವಲಿಸಿದರು.
ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ಮೊಕ್ತೇಸರ ಗುರುಪ್ರಸಾದ್ ರೈ ಮೊರಂಗಲ್ಲು ಕೃಷ್ಣಾ ಶುದ್ಧ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದರು. ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಗುಂಡ್ಯ ಮಾಡಾರಮನೆ ಶ್ರೀ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಪ್ರಗತಿಪರ ಕೃಷಿಕ ವಾಸುದೇವ ಗೌಡ ಕುಡೆಕಲ್ಲು, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧಾಮ ಆಲೆಟ್ಟಿ,ಸುಳ್ಯ ತಾಲೂಕು ಪಾಟಾಳಿ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ, ಕಾಂಪ್ಲೆಕ್ಸ್ ಮಾಲಕ ಜತ್ತಪ್ಪ ಗೌಡ ನಾಗಪಟ್ಟಣ, ಚಂದ ಪಾಟಾಳಿ ಕುಡೆಕಲ್ಲು, ಶ್ರೀಮತಿ ಸುಶೀಲಾ ಎನ್ ಮೊರಂಗಲ್ಲು ಉಪಸ್ಥಿತರಿದ್ದು
ಶುಭ ಹಾರೈಸಿದರು.
ಪಾಟಾಳಿ /ಗಾಣಿಗ ಸಮಾಜ ಬಾಂಧವರು ಹಾಗೂ ಸ್ಥಳೀಯ ಗ್ರಾಮಸ್ಥರು ಮತ್ತು ಬಂಧುಗಳು ಉಪಸ್ಥಿತರಿದ್ದರು.
ಕೇಶವ ಮೊರಂಗಲ್ಲು ಮತ್ತು ವಿಜಯ್ ಮೊರಂಗಲ್ಲು ಸರ್ವರನ್ನೂ ಸ್ವಾಗತಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕೃಷಿಕರಿಂದ ಖರೀದಿಸಿದ ಗುಣಮಟ್ಟದ ಕೊಬ್ಬರಿಯಿಂದ ಪರಿಶುದ್ಧ ತೆಂಗಿನ ಎಣ್ಣೆ ಹಾಗೂ ಶುದ್ಧ ಎಳ್ಳೆಣ್ಣೆ ಮಿತ ದರದಲ್ಲಿ ನೀಡಲಾಗುವುದು.
ಎಲ್ಲಾ ತರದ ಧವಸ ಧಾನ್ಯಗಳನ್ನು ಕ್ಲಪ್ತ ಸಮಯದಲ್ಲಿ ಹುಡಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದರು.