ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುಳ್ಯ ಬಿಜೆಪಿ ಕಛೇರಿಗೆ ಭೇಟಿ

0

ದೇಶದ ಅಭಿವೃದ್ಧಿಯಲ್ಲಿ ವಕೀಲರ ಪಾತ್ರ ಮುಖ್ಯ

ಮೋದಿಯವರ ವಿಕಸಿತ ಭಾರತ ಪರಿಕಲ್ಪನೆಯ ಜೊತೆಗೆ ದ.ಕ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ : ಕ್ಯಾ. ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಹಾಗೂ ಜಾತ್ಯಾತೀತ ಜನತಾದಳ ಮೈತ್ರಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಎ.17ರಂದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತಪ್ರಚಾರ ನಡೆಸುತ್ತಿದ್ದು, ಸುಳ್ಯದ ಬಿಜೆಪಿ ಕಛೇರಿಗೆ ಭೇಟಿ ನೀಡಿದರು.

ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಪಾಟಾಳಿ ಅವರು ಹೂಗುಚ್ಚ ನೀಡಿ ಬ್ರಿಜೇಶ್ ಚೌಟರನ್ನು ಸ್ವಾಗತಿಸಿದರು.
‌ಬಳಿಕ ಮಾತನಾಡಿದ ಕ್ಯಾ. ಚೌಟರು ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ. ಎಂದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಜನರಿಗೆ ಉದ್ಯೋಗ, ದೇಶದ ಉದ್ಯಮಶೀಲತೆಯಲ್ಲಿ ಅಭಿವೃದ್ಧಿ, ಸೇರಿ ದೇಶದ ರಕ್ಷಣೆಯ ದೂರದೃಷ್ಟಿತ್ವದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ ಪರಿಕಲ್ಪನೆಗೆ ಬದ್ಧನಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಉದ್ಧೇಶ ನನ್ನದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕಿ ಭಾಗಿರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಜಿಲ್ಲಾ ಉಪಾಧ್ಯಕ್ಷರುಗಳಾದ ವಿನಯಕುಮಾರ್ ಮುಳುಗಾಡು, , ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅಪ್ಪಯ್ಯ ಮಣಿಯಾಣಿ ಪುತ್ತೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಪಕ್ಷದ ಮುಖಂಡರುಗಳಾದ ಎಸ್‌.ಎನ್. ಮನ್ಮಥ, ಹರೀಶ್ ಕಂಜಿಪಿಲಿ, ದಿಲೀಪ್ ಬಾಬ್ಲುಬೆಟ್ಟು, ಮುಳಿಯ ಕೇಶವ ಭಟ್, ವೆಂಕಟ್ ದಂಬೆಕೋಡಿ, ಸೋಮನಾಥ ಪೂಜಾರಿ ಸುಳ್ಯ, ಸಂತೋಷ್ ಜಾಕೆ, ಹೇಮಂತ್ ಮಠ, ದೀಪಕ್ ಕುತ್ತಮೊಟ್ಟೆ, ಜಯರಾಜ್ ಕುಕ್ಕೇಟಿ, ಶ್ರೀಪತಿ ಭಟ್, ಶ್ರೀಕಾಂತ್ ಮಾವಿನಕಟ್ಟೆ, ದುರ್ಗೇಶ್ ಪಾರೆಪ್ಪಾಡಿ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಜಾತ್ಯಾತೀತ ಜನತಾದಳದ ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾದವ ಗೌಡ, ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.