ಎಡಮಂಗಲ ಗ್ರಾಮದ ಕೂಟಾಜೆ ದುಗ್ಗಣ್ಣರವರ ಪತ್ನಿ ಶ್ರೀಮತಿ ವಾರಿಜರವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಪ್ರಗತಿಪರ ಕೃಷಿಕರಾಗಿದ್ದ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು.
ಮೃತರು ಪತಿ ದುಗ್ಗಣ್ಣ ಗೌಡ, ಪುತ್ರರಾದ ಕುಶಾಲಪ್ಪ ಗೌಡ,ಯುವರಾಜ್ ಕೂಟಾಜೆ, ಮೋಹನ್ದಾಸ್ ಕೂಟಾಜೆ, ಸೊಸೆಯಂದಿರಾದ, ಮಮತಾ, ಲತಾ, ಲಿಖಿತ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.