ಬಿಜೆಪಿ ಮಂಡಲ ಮಾಜಿ ಉಪಾಧ್ಯಕ್ಷ ರಾಗಿ, ಜಾಲ್ಸೂರು ಶಕ್ತಿದ ಮಾಜಿ ಅಧ್ಯಕ್ಷ ರಾಗಿದ್ದ ಕರುಣಾಕರ ಅಡ್ಪಂಗಾಯ ಹಾಗೂ ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಬೀನಾ ಕರುಣಾಕರ ಅಡ್ಪಂಗಾಯ ದಂಪತಿ ಸಹಿತ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇಂದು ಸುಬ್ರಹ್ಮಣ್ಯ ದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ರಿದ್ದು ಕರುಣಾಕರ ಅಡ್ಪಂಗಾಯ ದಂಪತಿಗಳಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರುಣಾಕರ ಅಡ್ಪಂಗಾಯ ರು
“ಬಿಜೆಪಿ ಪಕ್ಷದಲ್ಲಿ ದುಡಿದವರನ್ನು ಕಡೆಗಣಿಸಲಾಗಿದೆ. ಅಡ್ಪಂಗಾಯದಲ್ಲಿ ಬಿಜೆಪಿ ಗೆಲುವು ಆಗದ ಸಂದರ್ಭದಲ್ಲಿ ಪಂಚಾಯತ್ ಚುನಾವಣೆಯಲ್ಲಿ ನಾವು ಗೆದ್ದು, ಕಾಂಗ್ರೆಸ್ ಬಹುಮತವಿದ್ದ ಪಂಚಾಯತ್ ನಲ್ಲಿ ಬಿಜೆಪಿ ಆಡಳಿತ ನಡೆಸಿದ್ದು ದಾಖಲೆ. ಕಳೆದ ಸಿ.ಎ. ಬ್ಯಾಂಕ್ ಚುನಾವಣೆಯಲ್ಲಿ ಪಕ್ಷ ಕೆಲವರ ಮಾತು ಕೇಳಿ ನಮಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಪಕ್ಷವನ್ನು ಜನರು ನೆಚ್ಚಿಕೊಂಡಿದ್ದು, ಗ್ಯಾರಂಟಿ ಯೋಜನೆ ಜನಪರವಾಗಿದೆ. ಬಿಜೆಪಿ ಸರಕಾರದಿಂದ ಬಡವರ ಪರ ಕೆಲಸ ಆಗುತಿಲ್ಲ. ನಮ್ಮ ಅಸ್ತಿತ್ವಕ್ಕೆ ನೋವಾಗುವಂತೆ ಕೆಲವು ವ್ಯಕ್ತಿಗಳು ಮಾಡಿದರೂ ಅದನ್ನು ಪಕ್ಷ ಸರಿಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.