ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಏಣಾವರದ ಕೆಮ್ಮಾರ ಜಗದೀಶ್ ಎಂಬವರ ಬಾಳೆ ತೋಟ ಮತ್ತು ಮರಗೆಣಸು ಕೃಷಿಯು ನಿನ್ನೆ ಸಂಜೆ ಬೀಸಿದ ಗಾಳಿಗೆ ತುತ್ತಾಗಿ ಸಂಪೂರ್ಣ ನಾಶವಾಗಿದೆ. ಬಾಳೆ ಗಿಡಗಳು ಬೆಳೆದು ನಿಂತಿದ್ದು ಗೊನೆ ಬಿಡುವ ಸಮಯದಲ್ಲಿ ನಾಶವಾಗಿರುವುದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.