ಅರಂತೋಡು : ಸಾವಿನಲ್ಲೂ ಜತೆಯಾದ ಸಹೋದರರು

0

ಅಣ್ಣ ನಿಧನರಾದ ವಿಷಯ ತಿಳಿದು‌ ಕುಸಿದ ತಮ್ಮನನ್ನು‌ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ತಮ್ಮ ಕೂಡಾ ಮೃತಪಟ್ಟಿದ್ದು, ಸಹೋದರಿಬ್ಬರು ಸಾವಿನಲ್ಲೂ ಕೂಡಾ ಜತೆಯಾಗಿದ್ದಾರೆ.

ಅರಂತೋಡು ಗ್ರಾಮದ ನಿವಾಸಿ ಅಬ್ದುಲ್ಲ ರವರು (82) ರವರು ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಈ ವಿಷಯ ತಿಳಿಯುತಿದ್ದಂತೆ ಸಹೋದರ ಉದಯನಗರದ ನಿವಾಸಿ ಮಹಮ್ಮದ್ (76) ಅವರು ಮನೆಯಲ್ಲಿ ಕುಸಿದುಬಿದ್ದರು.

ಮನೆಯವರು ತಕ್ಷಣ ಮಹಮ್ಮದ್ ರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಆ ವೇಳೆಗೆ ಮಹಮ್ಮದ್ ರವರು ಮೃತಪಟ್ಟರೆಂದು ತಿಳಿದುಬಂದಿದೆ.