ರಬ್ಬರ್ ಪ್ರಾದೇಶಿಕ (ಬೋರ್ಡ್) ಮಂಡಲಿ ಮತ್ತು ರಬ್ಬರ್ ಬೆಳೆಗಾರರ ಸಂಘ, ಐವರ್ನಾಡು ಇದರ ಸಹಯೋಗದೊಂದಿಗೆ ಮೇ.7 ರಂದು ಜಾಲ್ಸೂರು ಗ್ರಾಮದ ಸೋಣಂಗೇರಿ ಸಮೀಪದ ಗೋಂಟಡ್ಕ ಪ್ರಕಾಶ್ ರೈ ದೇರ್ಲರವರ ರಬ್ಬರ್ ತೋಟದಲ್ಲಿ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ರಬ್ಬರ್ ಬೆಳೆಗಾರರ ಸಂಘ, ಐವರ್ನಾಡು ಇದರ ಅಧ್ಯಕ್ಷ ರಾಜಾರಾಮ ರಾವ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಬ್ಬರ್ ಪ್ರಾದೇಶಿಕ (ಬೋರ್ಡ್) ಮಂಡಲಿಯ ಪುತ್ತೂರು ವಿಭಾಗದ ಅಭಿವೃದ್ಧಿ ಅಧಿಕಾರಿ ಅಜಿತ್ ಪ್ರಸಾದ್, ಸುಳ್ಯ ತಾಲೂಕು ಅಭಿವೃದ್ಧಿ ಅಧಿಕಾರಿ ಸಜೀ ಮ್ಯಾಥ್ಯೂ, ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿಗಳಾದ ಧನಂಜಯ, ಸಿಬ್ಬಂದಿ ಫ್ರಾನ್ಸಿಸ್ ಡಿಸೋಜ, ತರಬೇತುದಾರರುಗಳಾದ ಸೊಕ್ಕಲಿಂಗಂ.ಕೆ, ಶ್ರೀಮತಿ ಶಿವಯೋಗಂ, ಎಸ್.ಸತ್ಯಶಾಂತಿತ್ಯಾಗಮೂರ್ತಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಈ ಮಾಹಿತಿ ಕಾರ್ಯಾಗಾರ ಇನ್ನು 8 ದಿನ ಇರಲಿದ್ದು ಏ.15 ಕೊನೆಯ ದಿನವಾಗಿದ್ದು ಸಮಾರೋಪ ಸಮಾರಂಭದೊಂದಿಗೆ ಕೊನೆಗೊಳ್ಳಲಿದೆ.