ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ
ಆಶ್ರಯದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಇವರಿಂದ ಮೇ.11 ರಂದು ಯಕ್ಷಗಾನ ಬಯಲಾಟ ವೇದೋದ್ಧರಣ ಶಿವಪಂಚಾಕ್ಷರೀ ಮಹಿಮೆ ಯಕ್ಷಗಾನ ವಳಲಂಬೆಯಲ್ಲಿ ವೈಭವದಿಂದ ನಡೆಯಿತು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಖ್ಯಾತ ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಸಂಘಟನೆಯ ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ, ಪಿ ಎಸ್ ಚಂದ್ರಶೇಖರ ಪುಚ್ಚಪ್ಪಾಡಿ, ಗಂಗಾಧರ ಪುಚ್ಚಪ್ಪಾಡಿ,
ವೆಂಕಟೇಶ ಪುಚ್ಚಪ್ಪಾಡಿ, ಸುಬ್ರಹ್ಮಣ್ಯ ಪ್ರಸಾದ ಚಣಿಲ, ಡಾ. ವಿಷ್ಣುಪ್ರಸಾದ್ ಬರೆಕೆರೆ, ಹರೀಶ್ ಬಳಂತಿಮೊಗರು, ಉದಯಕುಮಾರ್ ಕಮಿಲ,
ಸತ್ಯನಾರಾಯಣ ಹೊನ್ನಾಡಿ, ಕೃಷ್ಣ ಭಟ್ ಹೊನ್ನಡಿ, ಮಹೇಶ್ ಪುಚ್ಚಪ್ಪಾಡಿ , ಸತ್ಯನಾರಾಯಣ ಮಾತೃಮಜಲು, ಮತ್ತಿತರರು ಉಪಸ್ಥಿತರಿದ್ದರು. ಅಪರ್ಣಾ ಪುಚ್ಚಪ್ಪಾಡಿ ನಿರೂಪಿಸಿದರು.
ಭಾಗವತರಾಗಿ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ-ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಲ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ನಿಶ್ವತ್ ಜೋಗಿ ಜೋಡುಕಲ್ಲು ಇದ್ದರು.