ಕೂತ್ಕುಂಜ-ಹೆಬ್ಬಾರುಹಿತ್ಲು ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿ: ತಹಶೀಲ್ದಾರ್ ಭೇಟಿ

0

ಭಾರಿ ಗಾಳಿ ಮಳೆಗೆ ಮೇ.15 ರಂದು ಸಂಜೆ ಕೂತ್ಕುಂಜ ಗ್ರಾಮದ ಹೆಬ್ಬಾರುಹಿತ್ಲು ಚನಿಯ ಎಂಬವರ ಮನೆ ಮೇಲೆ ಭಾರಿ ಗಾತ್ರದ ಮರ ಬಿದ್ದು ಮನೆ ಸಂಪೂರ್ಣ ಮುರಿದು ಬಿದ್ದಿದೆ.

ಮೇ.16 ರಂದು ಸಂಜೆ ತಹಶೀಲ್ದಾರ್ ಜಿ ಮಂಜುನಾಥ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ ಮೊದಲಾದವರು ಉಪಸ್ಥಿತರಿದ್ದರು.