ಬೇಂಗಮಲೆ : ಆಲ್ಟೋ 800 ಕಾರು ಅಪಘಾತ, ಪ್ರಯಾಣಿಕರು ಪಾರು

0

ಆಲ್ಟೋ 800 ಕಾರು ಚಾಲಕನ ನಿಯಂತ್ರಣ ತಪ್ಪಿ ಬೇಂಗಮಲೆ ಸಮೀಪ ರಸ್ತೆ ಬದಿಯ ಬರೆಗೆ ಗುದ್ದಿದ ಘಟನೆ ನಡೆದಿದೆ.

ಸುಳ್ಯದಿಂದ ಬೆಳ್ಳಾರೆ ಕಡೆ ಹೋಗುತ್ತಿದ್ದ ಕಾರು ಅಪಘಾತ ಸಂಭವಿಸಿದೆ. ಕಾರಿನಲ್ಲಿ ಮಹಿಳೆ ಹಾಗೂ ಮಕ್ಕಳು ಇದ್ದು ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಬಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ ಎಂದು ತಿಳಿದುಬಂದಿದೆ.