ಕಲ್ಲುಗುಂಡಿ: ಬೈಕ್ – ಬೊಲೆರೋ ಅಪಘಾತ – ಜಖಂ

0

ಬೈಕ್ ಮತ್ತು ಬೊಲೆರೋ ಜೀಪ್ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿ, ವಾಹನಗಳು ಜಖಂಗೊಂಡ ಘಟನೆ ದ‌.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ಮೇ.18ರಂದು ಮಧ್ಯಾಹ್ನ ಸಂಭವಿಸಿದೆ‌.

ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದ ಬೊಲೆರೋ ಜೀಪ್ ಕಲ್ಲುಗುಂಡಿಯ ನ್ಯಾಷನಲ್ ಸ್ಟೋರ್ ಬಳಿ
ಹೊಡೆದಿದ್ದು, ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಬೈಕ್ ಸವಾರ ವಾಹನವೊಂದನ್ನು ಓವರ್ ಟೇಕ್ ಮಾಡುವ ವೇಳೆ ಮುಂಭಾಗದಿಂದ ಬಂದ ಬೊಲೆರೋ ಜೀಪಿಗೆ ಢಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ.