ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿಗೆ ಸುಳ್ಯದಲ್ಲಿ ಸ್ವಾಗತ

0

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿಎಂ ಶಹೀದ್ ತೆಕ್ಕಿಲ್ ವತಿಯಿಂದ ಸನ್ಮಾನ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಪ್ರಥಮ ಭಾರಿಗೆ ಸುಳ್ಯಕ್ಕೆ ಆಗಮಿಸಿದ ನಾಗಲಕ್ಷ್ಮಿ ಚೌದರಿಯವರನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಜ್ಯೋತಿ ವೃತ್ತದ ಬಳಿ ಹೂಗುಚ್ಚವನ್ನು ನೀಡಿ ಸ್ವಾಗತಿಸಿದರು.


ಈ ಸಂದರ್ಭದಲ್ಲಿ ಅವರಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಈ ವೇಳೆ ಇತ್ತೀಚೆಗೆ ಹತ್ಯೆಗಿಡಾದ ನೇಹಾ ಹಾಗೂ ಅಂಜಲಿ ಸಾವಿನ ಕುರಿತು ಸುದ್ದಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಯ ಬೇಜವಾಬ್ದಾರಿಯ ಕುರಿತು ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಕಾನೂನಿನ ರೀತಿಯಲ್ಲಿ ನ್ಯಾಯ ತೆಗೆಸಿಕೊಡುವಲ್ಲಿ ಸಂಪೂರ್ಣ ಪ್ರಯತ್ನವನ್ನು ಮಾಡುವುದಾಗಿ ಹೇಳಿದರು.


ಮಹಿಳಾ ದೌರ್ಜನ್ಯದ ವಿರುದ್ಧ ಆಯೋಗದ ವತಿಯಿಂದ ಪೊಲೀಸ್ ಹಿರಿಯ ಧಿಕಾರಿಗಳ ಮುಖೇನಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.


ಈ ಸಂಧರ್ಭದಲ್ಲಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಹೈಕೋರ್ಟ್ ಪ್ಲೀಡರ್ ನ್ಯಾಯಾವಾದಿ ವಹೀದಾ ಹಾರೀಸ್ ತೆಕ್ಕಿಲ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಹಾಜಿ ಮುಸ್ತಫ ಜನತಾ,ಸುಳ್ಯ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ರಾಜು ಪಂಡಿತ್,ಬೆಂಗಳೂರು ಪಾರ್ವರ್ಡ್ ನ ಗ್ರೂಪ್ ನ ಹಾರೀಸ್ ತೆಕ್ಕಿಲ್, ವೆಂಕಟರಮಣ ಕೋ.ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ ಕೆ.ಟಿ ವಿಶ್ವನಾಥ್, ಪ್ರಹ್ಲಾದ್ ಪುತ್ತೂರು, ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ನ್ಯಾಯಾವಾದಿ ಅಬೂಬಕ್ಕರ್ ಹನೀಫ್ ಬೀಜಕೊಚ್ಚಿ, ಫಾತಿಮಾ ಶಿಬಾ ಬೀಜಕೊಚ್ಚಿ, ಸಲೀಮ್ ಪೆರಂಗೋಡಿ, ಭೋಜಪ್ಪ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.