ಸುಳ್ಯ ಜೂನಿಯರ್ ಕಾಲೇಜು ರಸ್ತೆ ಬದಿ ಮಳೆಗೆ ದೊಡ್ಡ ಹೊಂಡ ನಿರ್ಮಾಣ

0

ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ

ಸುಳ್ಯ ಸರಕಾರಿ ಆಸ್ಪತ್ರೆ ಸಮೀಪದಿಂದ ಜೂನಿಯರ್ ಕಾಲೇಜು ಸಂಪರ್ಕಿಸುವ ರಸ್ತೆ ಬದಿಯಲ್ಲಿ ಮಳೆನೀರು ಕೊಚ್ಚಿಕೊಂಡು ಹೋಗಿ ರಸ್ತೆ‌ಬದಿ ದೊಡ್ಡ ಹೊಂಡ ನಿರ್ಮಾಣವಾಗಿದೆ.


ಡಾಮರು ರಸ್ತೆ ಬದಿಯೆ ದೊಡ್ಡ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರು ಹೊಂಡಕ್ಕೆ ಬೀಳುವ ಸಂಭವವಿದೆ.


ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಹೊಂಡವು ರಸ್ತೆ ಬದಿಯಲ್ಲಿಯೇ ಇರುವುದರಿಂದ ಸಂಬಂಧಪಟ್ಟವರು ಗಮನರಿಸಬೇಕಾಗಿದೆ.