ಕೆ ವಿ ಜಿ ವಿದ್ಯಾಸಂಸ್ಥೆ ಸೇರಿದಂತೆ ಇನ್ನಿತರ ಸಂಸ್ಥೆಗಳಲ್ಲಿ ಮತಯಾಚನೆ
ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಜೂನ್ 3 ರಂದು ನಡೆಯಲಿದ್ದು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭಾಸ್ಕರ್ ಶೆಟ್ಟಿ ಟಿ ರವರು ಮೇ 25ರಂದು ಸುಳ್ಳಕ್ಕೆ ಭೇಟಿ ನೀಡಿ ಕೆವಿಜಿ ಶಿಕ್ಷಣ ಸಂಸ್ಥೆ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಮತಯಾಚನೆ ನಡೆಸಿದರು.
ಬಳಿಕ ಸುದ್ದಿ ವರದಿಗಾರರೊಂದಿಗೆ ಮಾತನಾಡಿದ ಅವರು ‘ನಾನು ನಿವೃತ್ತ ಉಪನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದು, ಶಿಕ್ಷಣ ಇಲಾಖೆಯಲ್ಲಿ ಮೂರುವರೆ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾರಣ ಈ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳು, ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಎಲ್ಲವೂ ತಿಳಿದಿರುತ್ತೇನೆ.
ನನ್ನ ಆಯ್ಕೆಯಿಂದ ಶಿಕ್ಷಕರ ಹಾಗೂ ಆ ಕ್ಷೇತ್ರದ ಸಮಸ್ಯೆಗೆ ಪರಿಹಾರದೊರಕಿಸುವ ಹಾಗೂ ಪರಿಷತ್ತಿನ ಒಳಗೆ ಶಿಕ್ಷಕರ ಪರ ಧ್ವನಿ ಗಟ್ಟಿಯಾಗಿ ಮೊಳಗಳಿಸಲು ಸಿದ್ಧನಿದ್ದೇನೆ. 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ತಕ್ಷಣದಲ್ಲಿ ಅನುಷ್ಠಾನಕ್ಕೆ ತರುವುದು, ಅತಿಥಿ ಶಿಕ್ಷಕರ/ ಅತಿಥಿ ಉಪನ್ಯಾಸಕರಿಗೆ ವೇತನ ಭದ್ರತೆ ಹಾಗೂ ಸೇವಾ ಭದ್ರತೆ, ಉನ್ನತ ಶಿಕ್ಷಣ/ ಪದವಿ ಕಾಲೇಜಿನ ಆರ್ಹತೆ/ ಸೇವಾ ಹಿರಿತನದ ಆಧಾರದಲ್ಲಿ ಮುಂಭಡ್ತಿ ಹಾಗೂ ಪ್ರಾಂಶುಪಾಲರ ಹುದ್ದೆಗೆ ಅವಕಾಶ ಕಲ್ಪಿಸುವುದು, ಖಾಲಿ ಇರುವ ಹುದ್ದೆಗಳನ್ನು ಪ್ರತಿ ವರ್ಷವು ಭರ್ತಿ ಮಾಡುವುದು ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ಒದಗಿಸುವುದು ಹಾಗೂ ಪರೀಕ್ಷೆ ಮತ್ತು ಇತರೆ ಗೊಂದಲಗಳಿಗೆ ಆಸ್ಪದವಿಲ್ಲದಂತಹ ಸನ್ನಿವೇಶ ಸೃಷ್ಟಿಸುವುದು ಇವೆಲ್ಲದಕ್ಕೂ ನಾನು ಮೊದಲ ಆದ್ಯತೆ ನೀಡಲಿದ್ದೇನೆ ಎಂದು ಹೇಳಿದರು.
ಪ್ರಾಥಮಿಕ ಶಾಲೆಯ ಶಿಕ್ಷಕರಿಗೂ ಮತದಾನದ ಹಕ್ಕನ್ನು ಕಲ್ಪಿಸುವುದರ ಮೂಲಕ ಶಿಕ್ಷಕರ ಬಲವನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಕರ ಕ್ಷೇತ್ರ ಮಲಿನವಾಗದಂತೆ ತಡೆಯುವುದು ಕೂಡ ನನ್ನ ಆಧ್ಯತೆಯಾಗಿದೆ ಆದ್ದರಿಂದ ಪ್ರೀತಿಯ ಮತದಾರ ಬಾಂಧವರು ಕ್ರಮ ಸಂಖ್ಯೆ 6ರ ಎದುರಿನ ಭಾಸ್ಕರ ಶೆಟ್ಟಿ ಟಿ ಎಂಬ ನನ್ನ ಹೆಸರಿನ ಮುಂದೆ ಮತದಾನ ಕೇಂದ್ರದಲ್ಲಿ ನೀಡುವ ಪೆನ್ನನ್ನೇ ಬೆಳೆಸಿ ಗುರುತು ಸಂಖ್ಯೆ ಒಂದನ್ನು ನಮೂದಿಸಿ ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು. ಇವರೊಂದಿಗೆ ಖ್ಯಾತ ಕಣ್ಣಿನ ತಜ್ಞರಾದ ಪ್ರೋ.ಸುಬ್ಬಣ್ಣ ಶೆಟ್ಟಿ, ಮತ್ತು ಬಳಗದವರು ಉಪಸ್ಥಿತರಿದ್ದರು.