ನಮ್ಮ ಆರೋಗ್ಯಧಾಮದಲ್ಲಿ ಮಕ್ಕಳಿಗೆ ಉಚಿತ ಡಾಕ್ಟರ್ ಕಿಟ್ ವಿತರಣೆ

0

ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತವಾಗಿ ‘ಡಾಕ್ಟರ್ ಕಿಟ್’ ಗಳನ್ನು ಮೇ.26ರಂದು ವಿತರಿಸಲಾಯಿತು.

ಮಕ್ಕಳು ಉತ್ತಮ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಲು ಹಾಗೂ ಸಮಾಜಸೇವೆಯನ್ನು ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಿಟ್ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಲು ಹಾಗೂ ಜ್ಞಾಪಕ ಶಕ್ತಿಯನ್ನು ವೃದ್ಧಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. ಆಪ್ತ ಸಮಾಲೋಚನಾ ತಜ್ಞರಾದ ಶ್ರದ್ಧಾ ರೈ, ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನ ಸರ್ಜನ್ ಮತ್ತು ಆಡಳಿತಾಧಿಕಾರಿಯಾಗಿರುವ ಡಾ|ಕಿಶನ್ ರಾವ್ ಬಾಳಿಲ ಉಪಸ್ಥಿತರಿದ್ದರು.