ಅಧ್ಯಕ್ಷ: ಕೇಶವ ಕುದ್ವ, ಕಾರ್ಯದರ್ಶಿ: ಅಶೋಕ್ ಡಿ’ಸೋಜ
ಪಂಜ ವಲಯ(ಐವತ್ತೊಕ್ಲು,ಕೂತ್ಕುಂಜ) ಕಾಂಗ್ರೆಸ್ ಪಕ್ಷದ ನಾಯಕರ,ಕಾರ್ಯಕರ್ತರ ಹಾಗೂ ಮತದಾರರ ಸಭೆಯನ್ನು ಮೇ.30 ಪಂಜ ವಿ.ಕೆ.ರೆಸಿಡೆನ್ಸಿ ಯಲ್ಲಿ ನಡೆಯಿತು.
ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ರವರ ಗೆಲುವಿಗಾಗಿ ಕೆಲಸ ಮಾಡಿದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಹೊಸ ಪಂಜ ವಲಯ ಕಾಂಗ್ರೆಸ್ ಸಮಿತಿ ರಚನೆ ನಡೆಯಿತು.
ಸಭಾಧ್ಯಕ್ಷತೆಯನ್ನು ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಜೀವಿ ರೈ ಪುಡ್ಕಾಜೆ , ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ಸತ್ಯನಾರಾಯಣ ಭಟ್ ಕಾಯಂಬಾಡಿ ಉಪಸ್ಥಿತರಿದ್ದರು.ಲೋಕಸಭಾ ಚುನಾವಣೆ ಯಲ್ಲಿ ದುಡಿದ ಕಾರ್ಯಕರ್ತರಿಗೆ ಶ್ರೀಮತಿ ರಾಜೀವಿ ರೈ ರವರು ಅಭಿನಂದಿಸಿದರು. ಸಭಿಕರ ಪರವಾಗಿ ಲಕ್ಷ್ಮಣ ಬೊಳ್ಳಾಜೆ,ರಫೀಕ್ ಐವತ್ತೊಕ್ಲು ಹಾಗು ಚಿನ್ನಪ್ಪ ಸಂಕಡ್ಕ ಅನಿಸಿಕೆಗಳನ್ನು ಹೇಳಿದರು.
ಪದಾಧಿಕಾರಿಗಳು:
ಪಂಜ ವಲಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೇಶವ ಕುದ್ವ, ಕಾರ್ಯದರ್ಶಿಯಾಗಿ ಅಶೋಕ್ ಡಿ’ಸೋಜ,ಜೊತೆ ಕಾರ್ಯದರ್ಶಿಯಾಗಿ ಬಾಲಚಂದ್ರ ಕರಿಮಜಲು, ಉಪಾಧ್ಯಕ್ಷರಾಗಿ ರಫೀಕ್ ಐವತೊಕ್ಲು, ನವೀನ್ ಚಂದ್ರ ಕಂಬಳ,ಮಹಮ್ಮದ್ ನೆಮನಕಜೆ, ಲಕ್ಷ್ಮಣ ಕುಳ್ಳಕೋಡಿ,ರವಿ ಚಳ್ಳಕೋಡಿ,ಜಮಾಲ್ ಪಂಜ,ಸಲೀನ ಡಿ.ಸೋಜ, ಧರ್ಮಪಾಲ ನೆಕ್ಕಿಲ, ದೇವಣ್ಣ ನಾಯ್ಕ್ ಕೊಟ್ರಂಜ, ಡಾ. ಪ್ರಕಾಶ್ ಡಿ’ಸೋಜ,ರಾಮಚಂದ್ರ ಅಡ್ಡತ್ತೋಡು,ಸಂತೋಷ್ ಕುಳ್ಳಾಜೆ, ದುರ್ಗಾ ಕುಮಾರ್ ಬಸ್ತಿ ಕಾಡು, ಆಯ್ಕೆಯಾದರು. ಪಂಜದ ಹಿರಿಯ ಕಾಂಗ್ರೆಸ್ ನಾಯಕರನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ದಿನೇಶ್ ಪುಂಡಿಮನೆ,ಗಂಗಾಧರ ಗುಂಡಡ್ಕ , ವಸಂತ ಕುಮಾರ್ ಕೆದಿಲ, ಜಯರಾಮ ಕಂಬಳ, ಕುಸುಮಾಧರ ಕೆರೆಯಡ್ಕ, ಮಥಾಯಸ್ ಡಿ’ಸೋಜ, ಲೋಕನಾಥ ಕುದ್ವ ಹಾಗೂ ಪಂಜ ವಲಯದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ದೇವಿಪ್ರಸಾದ್ ಕಾನತ್ತೂರ್ ಸ್ವಾಗತಿಸಿದರು ಮತ್ತು ನಿರೂಪಿಸಿದರು. ಹಾಗೂ ಚಿನ್ನಪ್ಪ ಸಂಕಡ್ಕ ವಂದಿಸಿದರು.