ಜೂ.1(ನಾಳೆ): ಪಂಜದಲ್ಲಿ ಲಯನ್ಸ್ ಭವನ ಲೋಕಾರ್ಪಣೆ ಸಮಾರಂಭ

0

ಲಯನ್ಸ್ ಕ್ಲಬ್ ಪಂಜ , ಲಯನ್ಸ್ ಸೇವಾಟ್ರಸ್ಟ್( ರಿ) ಪಂಜ ವತಿಯಿಂದ ಶ್ರೀಮತಿ ದಿ.ಅಮ್ಮಕ್ಕ ಮತ್ತು ದಿ.ಮರಿಯಣ್ಣ ಗೌಡ ಬಿಳಿಮಲೆ ಸ್ಮರಣಾರ್ಥ ಲಯನ್ಸ್ ಭವನ ಇದರ ಉದ್ಘಾಟನಾ ಸಮಾರಂಭ ಜೂ.1ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಪ್ರಕೃತಿ ರಮಣೀಯ, ಇತಿಹಾಸ ಪ್ರಸಿದ್ಧವಾದ ಕೋಟಿ-ಚೆನ್ನಯರ ನೆಲೆವೀಡು ಪಂಜದಲ್ಲಿ ಕಳೆದ 14 ವರ್ಷಗಳಿಂದ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಕ್ರಿಯಾಶೀಲತೆಯಿಂದ ಕಾರ್ಯವೆಸಗುತ್ತಿದೆ. ಜನೋಪಯೋಗಿ ಸೇವಾ ಚಟುವಟಿಕೆಗಳ ಮೂಲಕ ಸ್ಥಳೀಯ ಜನತೆಯ ಅಚ್ಚುಮೆಚ್ಚಿನ ಸಂಘಟನೆಯಾಗಿರುತ್ತದೆ. ಕ್ಲಬ್ ನ ಸದಸ್ಯರಾಗಿದ್ದ ದಿವಂಗತ ಲ|Iಚಿದಾನಂದ ಬಿಳಿಮಲೆ ಹಾಗೂ ಶ್ರೀಮತಿ ಯಶೋಧ ಬೆಳಿಮಲೆ ದಂಪತಿಗಳು ಸುಮಾರು 5 ಸೆಂಟ್ಸ್ ಸ್ಥಳವನ್ನು ದಾನವಾಗಿ ಪಂಜದ ಹೃದಯಭಾಗದಲ್ಲಿ (ಚರ್ಚ್ ಗೇಟ್ ಬಳಿ) ನೀಡಿರುತ್ತಾರೆ. ಇಲ್ಲಿ ದಿ.ಶ್ರೀಮತಿ ಅಮ್ಮಕ್ಕ ಮತ್ತು ದಿ.ಮರಿಯಣ್ಣ ಗೌಡ ಬಿಳಿಮಲೆ ಅವರ ಸ್ಮರಣಾರ್ಥ ಲಯನ್ಸ್ ಭವನವೊಂದನ್ನು ನಿರ್ಮಿಸುವ ಕಾರ್ಯಯೋಜನೆಯೊಂದಿಗೆ ಕ್ಲಬ್ ನ ಸರ್ವ ಸದಸ್ಯರು ಸನ್ನದ್ಧರಾಗಿದ್ದು, ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲ|ವಸಂತ ಶೆಟ್ಟಿ PMJF ರವರ ಅಮೃತಹಸ್ತದಿಂದ ಶಿಲನ್ಯಾಸಗೊಂಡಿರುತ್ತದೆ. ಸುಮಾರು 2000 ಚದರ ಅಡಿಯ ಎರಡು ಅಂತಸ್ತಿನ ಕಟ್ಟಡದಲ್ಲಿ ಸುಸಜ್ಜಿತ ಸಭಾಂಗಣ, ಭೋಜನ ಶಾಲೆ, ಹಾಗೂ ಸಭಾ ಕೊಠಡಿಯನ್ನು ಒಳಗೊಂಡಿರುತ್ತದೆ. ಈಗಾಗಲೇ ನೀಲ ನಕಾಶೆಯಂತೆ ಅಂದಾಜು ವೆಚ್ಚ ರೂ 50 ಲಕ್ಷ ವೆಚ್ಚದಲ್ಲಿ ಲಯನ್ಸ್ ಭವನದ ನೆಲ ಅಂತಸ್ತಿನ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಜೂ.1.(ನಾಳೆ) ರಂದು ಲೋಕಾರ್ಪಣೆ ನಡೆಯಲಿದೆ.

ಲಯನ್ಸ್ ಜಿಲ್ಲೆ 317 ಡಿ ರಾಜ್ಯಪಾಲ ಲII PMJF ಡಾ. ಮೇಲ್ವಿನ್ ಡಿ’ಸೋಜ ಉದ್ಘಾಟಿಸಲಿದ್ದಾರೆ.ಲಯನ್ಸ್ ಜಿಲ್ಲೆ 317 ಡಿ ನಿಕಟಪೂರ್ವ ರಾಜ್ಯಪಾಲ ಲII PMJF ಸಂಜೀತ್ ಶೆಟ್ಟಿ ನಾಮಪಲಕ ಅನಾವರಣ ಗೊಳಿಸಲಿದ್ದಾರೆ. ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ನಿಕಟಪೂರ್ವಾಧ್ಯಕ್ಷ ಲII PMJF ವಸಂತ ಶೆಟ್ಟಿ ದಾನಿಗಳ ಫಲಕ ಅನಾವರಣ ಗೊಳಿಸಲಿದ್ದಾರೆ. ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲII ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆ ವಹಿಸಲಿದ್ದಾರೆ‌. ಸ್ಥಳ ದಾನಿಗಳಾದ ಶ್ರೀಮತಿ ಯಶೋಧ ಚಿದಾನಂದ ಬಿಳಿಮಲೆ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಅವರನ್ನು ಲಯನ್ಸ್ ಜಿಲ್ಲೆ 317 ಡಿ ಪೂರ್ವ ರಾಜ್ಯಪಾಲ ಲII MJFಯಂ ಬಿ ಸದಾಶಿವ ಸನ್ಮಾನಿಸಲಿದ್ದಾರೆ. ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ,ಲಯನ್ಸ್ ಜಿಲ್ಲೆ 317 ಡಿ ಉಪ ರಾಜ್ಯಪಾಲೆ ಲII PMJF ಭಾರತಿ ಬಿ ಎಂ,ಲಯನ್ಸ್ ಜಿಲ್ಲೆ 317 ಡಿ ದ್ವಿತೀಯ ರಾಜ್ಯಪಾಲ. ಲII PMJF ಕುಡ್ಪಿ ಅರವಿಂದ ಶೆಣೈ, ಲಯನ್ಸ್ ಜಿಲ್ಲೆ 317 ಡಿ (ಚುನಾಯಿತ)ರಾಜ್ಯಪಾಲ ಲII PMJF ಎಚ್ ಎಂ ತಾರಾನಾಥ್, ಲಯನ್ಸ್ ಜಿಲ್ಲೆ 317 ಡಿ
ಪೂರ್ವ ರಾಜ್ಯಪಾಲ ಲII PMJF
ಗೀತ ಪ್ರಕಾಶ್, ಪ್ರಾಂತೀಯ ಅಧ್ಯಕ್ಷೆ ಲII MJF ರೇಣುಕಾ ಸದಾನಂದ ಜಾಕೆ
ವೇದಿಕೆಯಲ್ಲಿ ಉಪಸ್ಥಿತರಿರುವರು.