ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನ ಎಣ್ಮೂರು-ಐವತ್ತೊಕ್ಲು ಇದರ ಪುನರ್ ನಿರ್ಮಾಣ ಸಹಾಯಾರ್ಥ ಹಮ್ಮಿ ಕೊಂಡ ಅದೃಷ್ಟ ಕೂಪನ್ ಡ್ರಾ ಮೇ.31 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳದ ರಥ ಬೀದಿಯಲ್ಲಿ ನಡೆಯಿತು.
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಕಾರ್ಯದರ್ಶಿ ಗುರು ಪ್ರಸಾದ್ ತೋಟ, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಕುಸುಮಾಧರ ಕರಿಮಜಲು, ಅದೃಷ್ಟ ಕೂಪನ್ ಸಂಚಾಲಕ ಅಶೋಕ್ ಮೇಲ್ಪಾಡಿ, ಸಹ ಸಂಚಾಲಕರಾದ ಶ್ರೀಮತಿ ನಳಿನಾಕ್ಷಿ ಪಂಜ, ಕಿಶೋರ್ ಬರಮೇಲು ಹಾಗೂ ರವಿ ಕಕ್ಕೆಪದವು , ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.