ಮರ್ಕಂಜದ ತೇರ್ಥಮಜಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹೊನ್ನಮ್ಮ ಎಂಬವರು ಮೇ.31ರಂದು ವೃತ್ತಿಯಿಂದ ನಿವೃತ್ತರಾದರು.
1986ರಲ್ಲಿ ಎಡಮಂಗಲ ಅಂಗನವಾಡಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಸೇರ್ಪಡೆಯಾದ ಇವರು ಬಳಿಕ ಪುಳಿಕುಕ್ಕು, ಅರಂತೋಡು, ಬಿಳಿಯಾರು, ದೇರಾಜೆ ಗಳಲ್ಲಿ ಕರ್ತವ್ಯ ನಿರ್ವಹಿಸಿ, ಮರ್ಕಂಜದ ತೇರ್ಥಮಜಲಿನಲ್ಲಿ ಕರ್ತವ್ಯ ದಿಂದ ಮೇ.31ರಂದು ನಿವೃತ್ತಿಯಾದರು.
ಇವರು ಮೂಲತಃ ಪಂಜದ ಪಳಂಗಾಯ ಹುಕ್ರಪ್ಪ ಗೌಡ ಮತ್ತು ಕೃಷ್ಣಮ್ಮ ದಂಪತಿಗಳ ಪುತ್ರಿ.
ಮರ್ಕಂಜ ಗ್ರಾಮದ ಯಕ್ಷಗಾನ ಕಲಾವಿದ ಬೋಜಪ್ಪ ಕೊಚ್ಚಿಯವರ ಪತ್ನಿ. ಪಲ್ಲವಿ ಪುತ್ರಿ. ಮತ್ತು ಪ್ರಜ್ವಲ್ ಮಗ.