ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರು ಒಂದು ಲಕ್ಷ ನಲವತ್ತೊಂಬತ್ತು ಸಾವಿರ ಮತಗಳ ಲೀಡ್ ಪಡೆದು ವಿಜಯಿಯಾಗಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರವೊಂದರಲ್ಲೇ 39,147 ಮತಗಳ ಲೀಡ್ ಪಡೆದಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಬ್ರಜೇಶ್ ಚೌಟರವರು 102762 ಮತಗಳನ್ನಿ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿಯವರು 63615 ಮತಗಳನ್ನು ಪಡೆದಿದ್ದಾರೆ.
ಉಳಿದಂತೆ ಇತರ ಅಭ್ಯರ್ಥಿಗಳು ಸುಳ್ಯ ಕ್ಷೇತ್ರದಲ್ಲಿ ಪಡೆದ ಮತಗಳ ವಿವರ ಇಂತಿದೆ :
ಕಾಂತಪ್ಪ ಅಲಂಗಾರ್ (ಬಿ.ಎಸ್.ಪಿ.) – 814
ದುರ್ಗಾಪ್ರಸಾದ್ (ಕರುನಾಡು) – 446
ಪ್ರಜಾಕೀಯ ಮನೋಹರ್ -169
ರಂಜಿನಿ ಮೊಟ್ಟೆಮನೆ (ಕೆ.ಆರ್.ಎಸ್.) – 171
ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ) – 176
ಮ್ಯಾಕ್ಸಿಂ ಪಿಂಟೊ (ಪಕ್ಷೇತರ) – 310
ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ) – 370
ದ.ಕ. ಲೋಕಸಭಾ ಕ್ಷೇತ್ರದಲ್ಲಿ 23576 ಮತಗಳು ನೋಟಾ ಲಭಿಸಿದ್ದು, ಇದರಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ನೋಟಾಕ್ಕೆ ದೊರೆತ 4541 ಮತಗಳು ಸೇರಿವೆ.