ಸೈಂಟ್ ಜೋಸೆಫ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮರವರಿಗೆ ಬೀಳ್ಕೊಡುಗೆ

0

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಕಳೆದ ೧೭ ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಸಿಸ್ಟರ್ ಬಿನೋಮರವರು ಆಂದ್ರಪ್ರದೇಶದ ಗುಂಟೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಸುಳ್ಯದಿಂದ ತೆರಳಲಿರುವ ಸಿಸ್ಟರ್ ಬಿನೋಮ ರವರಿಗೆ ಶಿಕ್ಷಣ ಸಂಸ್ಥೆಯಲ್ಲಿ ಬಿಳ್ಕೋಡುಗೆ ಸಮಾರಂಭ ಜೂ.೫ ರಂದು ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು.


೨೦೦೭ ರಲ್ಲಿ ಸುಳ್ಯದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗೆ ಮುಖ್ಯ ಶಿಕ್ಷಕಿಯಾಗಿ ಬಂದಿದ್ದರು.
ಇಲ್ಲಿ ಸುದೀರ್ಘ ೧೭ ವರ್ಷ ಮುಖ್ಯ ಶಿಕ್ಷಕಿಯಾಗಿ ಶಾಲಾ ಅಭಿವೃದ್ಧಿಯಲ್ಲಿ, ಎಸ್‌ಎಸ್‌ಎಲ್ ಸಿ ಯಲ್ಲಿ ಹಲವು ವರ್ಷಗಳಲ್ಲಿ ಶೇಕಡ ೧೦೦ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಜೂ.೫ ರಂದು ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಸೈಂಟ್ ಜೊಸೆಫ್ ವಿದ್ಯಾಸಂಸ್ಥೆ ಸಂಚಾಲಕ, ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರುಗಳಾದ ರೆ.ಪಾ ವಿಕ್ಟರ್ ಡಿಸೋಜ ವಹಿಸಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ ಇ, ಟಿಎಪಿಸಿಎಂಎಸ್ ಇದರ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯರಾಮ ದೇರಪ್ಪಜನಮನೆ,ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಜೆ.ಕೆ ರೈ,ಗುರುಸ್ವಾಮಿ,ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತ,ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ, ಯವರು ಸೈಂಟ್ ಜೋಸೆಫ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಶುಭ ಹಾರೈಸಿದರು.