2024-25 ಶೈಕ್ಷಣಿಕ ಸಾಲಿಗೆ , ಸ.ಉ.ಹಿ.ಪ್ರಾಥಮಿಕ ಶಾಲೆ ಬಳ್ಪ ಇದರ ಶಾಲಾ ಮಂತ್ರಿಮಂಡಲವನ್ನು ಮತದಾನ ಮಾಡುವುದರ ಮೂಲಕ ಪಾರದರ್ಶವಾಗಿ ರಚನೆ ಮಾಡಲಾಯಿತು ಮುಖ್ಯಮಂತ್ರಿಯಾಗಿ ಎಂಟನೇ ತರಗತಿಯ ಕೃತೇಶ್ .ಬಿ. ಹಾಗೂ ಉಪಮುಖ್ಯಮಂತ್ರಿಯಾಗಿ ಮನ್ವಿತಾ ಆಯ್ಕೆಯಾದರು ಇದರ ಜೊತೆಗೆ ಇನ್ನಿತರ ಖಾತೆಗಳನ್ನು ಆಯ್ಕೆಮಾಡಲಾಯಿತು ಈ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ, ಮತದಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲಾಯಿತು, ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಆನಂದ ವೈ.ಈ, ಪ್ರಮಾಣ ವಚನ ಬೋಧಿಸಿದರು ಹಾಗೂ ಅವರವರ ಕರ್ತವ್ಯ, ಜವಬ್ದಾರಿಗಳ ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅದ್ಯಾಪಕರು ಉಪಸ್ಥಿತರಿದ್ದರು