ಎಸ್. ಎಸ್. ಎಲ್. ಸಿ ಫಲಿತಾಂಶ ಮೇ 9ರಂದು ಪ್ರಕಟಗೊಂಡಿದ್ದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ದ ಪ್ರೌಢಶಾಲಾ ವಿದ್ಯಾರ್ಥಿ ಅಕ್ಷಯ್. ಪಿ. ನಾಯರ್ ಮರುಮೌಲ್ಯ ಮಾಪನದ ನಂತರದ ಫಲಿತಾಂಶದಲ್ಲಿ 577 ರ ಬದಲಾಗಿ 583 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ, ಹಾಗೂ ಭೂಮಿಕಾ. ಎಂ.ಎನ್ 529ರ ಬದಲಾಗಿ 534 ಅಂಕ ಪಡೆದು ಡಿಸ್ಟಿಂಕ್ಷನ್ ಗಳಿಸಿದ್ದಾರೆ. ಅನುತ್ತೀರ್ಣಗೊಂಡ ಒಬ್ಬ ವಿದ್ಯಾರ್ಥಿ ಮರುಮೌಲ್ಯಮಾಪನದಲ್ಲಿ ಉತ್ತೀರ್ಣರಾಗಿ ಶಾಲೆಯ ಫಲಿತಾಂಶ 99% ಆಗಿರುತ್ತದೆ. ಈ ಹಿಂದೆ ಅದು ಶೇ.97.5 ಇತ್ತು.