ಸುಳ್ಯ ಸಂತ ಜೋಸೆಫ್‌ ಶಾಲೆಯಲ್ಲಿ ಪರಿಸರ ದಿನಾಚರಣೆ

0

ಸುಳ್ಯ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ. 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.


ವಿಜ್ಞಾನ ಶಿಕ್ಷಕಿ ಸವಿತಾ ಕುತ್ತಿಮುಂಡ ಇವರು ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಾಲಾ ಸಂಚಾಲಕರಾದ ರೆ.ಫಾದರ್ ವಿಕ್ಟರ್ ಡಿಸೋಜಾ ಇವರು ನಮ್ಮ ಸುತ್ತಮುತ್ತಲು ಗಿಡ ಮರಗಳನ್ನು ನೆಟ್ಟು ಬೆಳೆಸಿ,ಪೋಷಿಸಿ ಅದೇ ರೀತಿ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದರ ಮೂಲಕ ನಮ್ಮಪರಿಸರವನ್ನು ಕಾಪಾಡಬೇಕು ಎಂದು ಹೇಳಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮಾರವರು,ಶಾಲಾ ಸಂಚಾಲಕರಾದ ರೆವೆರೆಂಡ್ ಫಾದರ್ ವಿಕ್ಟರ್ ಡಿಸೋಜರವರು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಸೇರಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.