ವಿವೇಕ ಬಾಳಿಲರವರು ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ

0

ಬಾಳಿಲ ಗ್ರಾಮದ ಮರಂಗಾಲ ಮನೆ ದಿ. ಗುಡ್ಡಪ್ಪ ಗೌಡ ಟೈಲರ್ ಹಾಗೂ ದಿ. ಜಾನಕಿ ದಂಪತಿ ಪುತ್ರ ವಿವೇಕ ಬಾಳಿಲರವರು ಪೋಲಿಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ ಗೊಂಡಿದ್ದಾರೆ ಇವರು ಖ್ಯಾತ ಕರಕುಶಲಕರ್ಮಿ ದಿ. ಮರಂಗಾಲ ಉಕ್ಕಣ್ಣ ಗೌಡ ಹಾಗೂ ತಿಮ್ಮಕ್ಕ ದಂಪತಿಗಳ ಮೊಮ್ಮಗನಾಗಿರುತ್ತಾರೆ ಪ್ರಸ್ತುತ ಇವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಪರಾಧ ವಿಭಾಗ ದಕ್ಷಿಣ ಕನ್ನಡ ಜಿಲ್ಲೆ ರವರ ಸಿಬ್ಬಂದಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ,ಇವರ ಪತ್ನಿ ವೀಣಾ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಪ್ರಸ್ತುತ ಇವರು ಅಕ್ಷಯ ಹಾಗು ಅನಿರುಧ್ ಎಂಬ ಇಬ್ಬರು ಮಕ್ಕಳೊಂದಿಗೆ ಮಂಗಳೂರಿನಲ್ಲಿ ನೆಲೆಸಿರುತ್ತಾರೆ.