ಪಾಟಾಜೆ ಸ. ಕಿ. ಪ್ರಾ. ಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗ್ ಕೊಡುಗೆ

0

ಸ. ಕಿ. ಪ್ರಾ. ಶಾಲೆ, ಪಾಟಾಜೆ ಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗ್ ಕೊಡುಗೆ ಬೆಳ್ಳಾರೆ ಮತ್ತು ಸೋಣಂಗೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಅನುರಾಧ ಎ. ಆರ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಸುಮಾರು ರೂ 10,000/- ಮೌಲ್ಯದ ಶಾಲಾ ಬ್ಯಾಗ್ ಗಳನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ.

ಇಂದು ಪಾಟಾಜೆ ಶಾಲೆಗೆ ಭೇಟಿ ನೀಡಿದ ವೇಳೆ ಮಕ್ಕಳೊಂದಿಗೆ ಆತ್ಮೀಯವಾಗಿ ವಿಚಾರಿಸಿ , ಬಳಿಕ ಮಕ್ಕಳಿಗೆ ಭವಿಷ್ಯಕ್ಕೆ ಉಪಯುಕ್ತ ಸಂದೇಶಗಳನ್ನು ನೀಡಿದರು. ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಟಾಜೆ ಇಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ತಂಗಮ್ಮ ಅವರು ಈ ವೇಳೆ ಉಪಸ್ಥಿತರಿದ್ದು, ಮಕ್ಕಳು ಹಾಗೂ ಪೋಷಕರ ಪರವಾಗಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಪರವಾಗಿ ಧನ್ಯವಾದ ಅರ್ಪಿಸಿದರು.