ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದ ಜಿಂಕೆಯ ರಕ್ಷಣೆ
ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ “ಸುದ್ದಿ”ಯ ಓಮ್ನಿಯಲ್ಲಿ ಚಿಕಿತ್ಸೆಗೆ ಸುಳ್ಯಕ್ಕೆ ರವಾನೆ
ಸೋಣಂಗೇರಿ – ದುಗ್ಗಲಡ್ಕ ರಸ್ತೆಯ ಗೋಂಟಡ್ಕ ಎಂಬಲ್ಲಿ ನಾಯಿಗಳ ದಾಳಿಗೆ ಸಿಲುಕಿ ಸಾವು ಬದುಕಿನ ಮಧ್ಯೆ ನರಳುತ್ತಿದ್ದ ಜಿಂಕೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಸುಳ್ಯಕ್ಕೆ ಕರೆತಂದ ಘಟನೆ ಇದೀಗ ವರದಿಯಾಗಿದೆ.
ಗೋಂಟಡ್ಕದಲ್ಲಿ ತುಂಬು ಗರ್ಭಿಣಿ ಜಿಂಕೆಯಂತೆ ಕಂಡುಬರುತ್ತಿದ್ದು, ನಾಯಿಗಳು ಇದರ ಮೇಲೆ ದಾಳಿ ನಡೆಸಿತ್ತು. ಇದು ಆ ದಾರಿಯಾಗಿ ಹೋಗುತ್ತಿದ್ದವರ ಗಮನಕ್ಕೆ ಬಂತು. ಅದಾಗಲೇ ಅರಣ್ಯಾಧಿಕಾರಿಗಳು ಕೂಡಾ ಅಲ್ಲಿಗೆ ಬಂದರು. ಅರಣ್ಯಾಧಿಕಾರಿಗಳು ಮತ್ತು ಅದೇ ರಸ್ತೆಯಲ್ಲಿ ಬಂದ ಯುವ ಮುಖಂಡ ಶ್ರೀಕಾಂತ್ ಮಾವಿನಕಟ್ಟೆಯವರು ಸೇರಿ ಗೋಂಟಡ್ಕದ ಮನೆಯೊಂದಕ್ಕೆ ಹೋಗುವ ಗೇಟಿನ ಬಳಿ ಅದನ್ನು ಉಪಚರಿಸತೊಡಗಿದರು. ಜಿಂಕೆಗೆ ತುರ್ತು ಚಿಕಿತ್ಸೆ ಬೇಕಾಗಿದ್ದ ಕಾರಣ ಬೇರೆ ವಾಹನವನ್ನು ಗೊತ್ತು ಮಾಡಿದ್ದರು. ಆಗ ಅದೇ ರಸ್ತೆಯಲ್ಲಿ ಬಂದ ಸುದ್ದಿ ಮಾಧ್ಯಮ ತಂಡ ಗಮನಿಸಿ ವರದಿಗಾಗಿ ನಿಂತರು.
ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಜಿಂಕೆಗೆ ತಕ್ಷಣದ ಚಿಕಿತ್ಸೆ ಬೇಕಾದ ಕಾರಣ ಸುದ್ದಿಯ ಓಮ್ನಿಯಲ್ಲೇ ಸುಳ್ಯಕ್ಕೆ ಕೊಂಡೊಯ್ಯಲಾಯಿತು.