ಸರ್ವೆ ಇಲಾಖೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಸುಳ್ಯ ಬಿ.ಜೆ.ಪಿ. ಅಧ್ಯಕ್ಷ ವೆಂಕಟ್ ವಳಲಂಬೆಯವರಿಂದ ಭೂ ಮಾಪನ ಇಲಾಖಾ ಸಹಾಯಕ ನಿರ್ದೇಶಕರಿಗೆ ಮನವಿ

0


ಸರ್ವೆ ಇಲಾಖೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಸುಳ್ಯ ಬಿ.ಜೆ.ಪಿ. ಅಧ್ಯಕ್ಷ ವೆಂಕಟ್ ವಳಲಂಬೆಯರು ಸುಳ್ಯ ಭೂ ಮಾಪನ ಇಲಾಖಾ ಸಹಾಯಕ ನಿರ್ದೇಶಕರಿಗೆ ಮನವಿಯನ್ನು ಜೂ.13ರಂದು ಸಲ್ಲಿಸಿದ್ದಾರೆ.
11ಇ ನಕ್ಷೆಯ ಮುಖಾಂತರ ದಸ್ತಾಾವೇಜನ್ನು ನೋಂದಣಿ ಮಾಡಿದ ನಂತರ ಭೂ ಮಾಪನ ಇಲಾಖೆಯ ನಕ್ಷೆಯಲ್ಲಿ ತುಂಡಾಗದೆ ಎಫ್.ಎಂ.ಬಿ. ನಕ್ಷೆಗಳು ಸಿಗದೇ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ನಕ್ಷೆಗಳು ದೊರೆಯದೆ ಇದ್ದ ಕಾರಣ ಭೂ ಖರೀದಿ/ಮಾರಾಟಗಾರರಿಗೆ ವ್ಯವಹಾರ ನಡೆಸಲು, ರೈತರಿಗೆ ಸಾಲ ಪಡಕೊಳ್ಳಲು ಅನಾನುಕೂಲವಾಗಿರುತ್ತದೆ. ಪಹಣಿ ಪತ್ರಗಳಲ್ಲಿ ದುರಸ್ತಿಗೊಂಡಿದ್ದರೂ ನಕ್ಷೆಗಳಲ್ಲಿ ದುರಸ್ತಿಯಾಗದೇ ಪುನಃ 11ಇ ಪೋಡಿಗಾಗಿ ಹಣ ಕಟ್ಟಿ ಪುನಃ ಅಳತೆ ಮಾಡುವ ಅನಿರ್ವಾತೆ ಎದುರಾಗಿರುತ್ತದೆ. ಮಾತ್ರವಲ್ಲದೆ ಸರ್ವೆ ಇಲಾಖೆಯಲ್ಲಿ ಜಮೀನಿನ ಪ್ಲಾಾಟಿಂಗ್/ಪೋಡಿ ಆಗದೆ ರೈತರು ಸಾಲ ಪಡಕೊಳ್ಳುವರೆ, ಭೂಮಿ ಖರೀದಿ ಮತ್ತು ಭೂಮಿ ಮಾರಾಟ ವ್ಯವಹರಣೆಗೆ ಕಷ್ಟವಾಗಿರುತ್ತದೆ. ರೈತರು ಸಾಲ ಪಡಕೊಳ್ಳುವರೆ ಅಗತ್ಯವಿರುವ ಎಫ್.ಎಂ.ಬಿ. ನಕ್ಷೆಗೆ ಅರ್ಜಿ ಹಾಕಿದಾಗ ಸದ್ರಿ ನಕ್ಷೆಗಳು ಕೂಡ ವಿಳಂಬವಾಗಿ ಅರ್ಜಿದಾರರಿಗೆ ಸಿಗುತ್ತಿರುವುದರಿಂದ ತುಂಬಾ ತೊಂದರೆಯಾಗಿರುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸುಳ್ಯ ಭೂ ಮಾಪನ ಇಲಾಖಾ ಸಹಾಯಕ ನಿರ್ದೇಶಕರಿಗೆ ಸುಳ್ಯ ಬಿ.ಜೆ.ಪಿ. ಅಧ್ಯಕ್ಷ ವೆಂಕಟ್ ವಳಲಂಬೆಯವರು ಮನವಿ ಮಾಡಿದ್ದಾಾರೆ.