ಉದ್ಘಾಟನೆಗೆ ಸಜ್ಜಾಗುತ್ತಿರುವ ಬೆಳ್ಳಾರೆ ಕೆಪಿಎಸ್ ನೂತನ ಕಟ್ಟಡ

0

ಬೆಳ್ಳಾರೆ ಕೆಪಿಎಸ್ ಪ್ರಾಥಮಿಕ ವಿಭಾಗಕ್ಕೆ ದಾನಿಗಳು ಕೊಡುಗೆಯಾಗಿ ನೀಡಿದ ನೂತನ ಕಟ್ಟಡದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮೂರು ನಾಲ್ಕು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಅಮೇರಿಕಾದ ಒಸಾಟ್ (OSAAt) ಸಂಸ್ಥೆ ಸುಮಾರು ಒಂದೂ ವರೆ ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಿ ಕೊಡಲಿದೆ.

ನೆಲ ಅಂತಸ್ತು ಮತ್ತು ಮೇಲಂತಸ್ತು ಸೇರಿದಂತೆ ಒಟ್ಟು 8 ತರಗತಿ ಕೊಠಡಿಗಳು, ಎರಡು ಶೌಚಾಲಯ ಕೋಣೆಗಳು ನಿರ್ಮಾಣವಾಗುತ್ತಿದೆ.

ಪುತ್ತೂರಿನ ಸೃಷ್ಟಿ ಕನ್ ಸ್ಟ್ರಕ್ಷನ್ಸ್ ಈ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದಾರೆ. ಪ್ರಸ್ತುತ ಎಲ್ಲಾ ತರಗತಿಗಳಲ್ಲೂ ವಿದ್ಯಾರ್ಥಿಗಳು ತುಂಬಿದ್ದು, ಕೆಲವು ತರಗತಿಗಳನ್ನು ಜೂನಿಯರ್ ಕಾಲೇಜಿನ ಬಳಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮುಂದಿನ ನವೆಂಬರ್ ತಿಂಗಳಲ್ಲಿ ಪ್ರಾಥಮಿಕ ಶಾಲಾ ಶತಮಾನೋತ್ಸವ, ಪ್ರೌಢಶಾಲೆಯ ವಜ್ರಮಹೋತ್ಸವ ಮತ್ತು ಪಿಯು ಕಾಲೇಜಿನ ಸುವರ್ಣ ಮಹೋತ್ಸವ ನಡೆಯಲಿದ್ದು, ಈ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.