ಬೆಳ್ಳಾರೆ ಕೆ.ಪಿ.ಎಸ್ ನಲ್ಲಿ ಶತಮಾನೋತ್ಸವ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆ

0

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಿ.ಪ್ರಾ.ಶಾಲೆ 100 ವರ್ಷ ಪೂರೈಸಿದ್ದು ಶತಮಾನೋತ್ಸವ ಆಚರಿಸುವ ಬಗ್ಗೆ ಮತ್ತು ಜೂ.30 ರಂದು ನಿವೃತ್ತಿಗೊಳ್ಳಲಿರುವ ಶಿಕ್ಷಕ ರಾಮಚಂದ್ರ ಭಟ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಜೂ.19 ರಂದು ಬೆಳ್ಳಾರೆ ಕೆ.ಪಿ.ಎಸ್.ನಲ್ಲಿ ನಡೆಯಿತು.


ಕೆ.ಪಿ.ಎಸ್. ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷ ಶ್ರೀನಾಥ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.


ಕೆ.ಪಿ.ಎಸ್.ನ ಹಿ.ಪ್ರಾ.ಶಾಲಾ ಮುಖ್ಯ ಗುರು ಮಾಯಿಲಪ್ಪರವರು ಸ್ವಾಗತಿಸಿ, ಕಾಲೇಜಿನ ಉಪಪ್ರಾಂಶುಪಾಲೆ ಉಮಾಕುಮಾರಿ ಪ್ರಾಸ್ತಾವಿಕ ಮಾತನಾಡಿದರು.


ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆ , ಶಾಲಾ ನೂತನ ಕಟ್ಟಡ ಉದ್ಘಾಟನೆ, ಕೆಪಿಎಸ್ ಶತಮಾನೋತ್ಸವ ಸಮಿತಿ,ಪ್ರೌಢಶಾಲಾ ಸುವರ್ಣಮಹೋತ್ಸವ,ಕಾಲೇಜಿನ ವಜ್ರಮಹೋತ್ಸವ ಆಚರಣೆ ಬಗ್ಗೆ ಚರ್ಚೆಗಳು ನಡೆದವು.


ಕೆಪಿಎಸ್ ಹಿರಿಯ ವಿದ್ಯಾರ್ಥಿ ಸಂಘ ರಚನೆ, ನಿವೃತ್ತರಿಗೆ ಸನ್ಮಾನ ದ ಬಗ್ಗೆ ಚರ್ಚೆಗಳು ನಡೆದವು.


ಜೂ.29 ರಂದು ನಿವೃತ್ತಿಗೊಳ್ಳಲಿರುವ ಶಿಕ್ಷಕ ರಾಮಚಂದ್ರ ಭಟ್ ರವರಿಗೆ ಸಾರ್ವಜನಿಕ ಸನ್ಮಾನ, ಜೂ.30 ರಂದು ಹಿರಿಯ ವಿದ್ಯಾರ್ಥಿ ಸಂಘ ರಚನೆ ,ಶತಮಾನೋತ್ಸವ ಆಚರಣಾ ಸಮಿತಿ ರಚನೆ ಮಾಡುವುದೆಂದು ತೀರ್ಮಾನಿಸಲಾಯಿತು.


ಸಭೆಯಲ್ಲಿ‌ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ, ರಾಜೀವಿ ಆರ್.ರೈ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ, ರೋಟರಿ ಕ್ಲಬ್ ಶಶಿಧರ ಬಿ.ಕೆ, ಸಾಮಾಜಿಕ ಮುಂದಾಳು, ಆರ್.ಕೆ.ಭಟ್ ಕುರುಂಬುಡೇಲು, ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆ, ದಿನೇಶ್ಚಂದ್ರ ಹೆಗ್ಡೆ, ಪುರಂದರ ಭಟ್, ಜಯರಾಮ ಉಮಿಕ್ಕಳ, ಕಿರಣ್ , ವಸಂತ ಉಲ್ಲಾಸ್, ಮಹಾಲಿಂಗ ಬೆಳ್ಳಾರೆ, ವೀರನಾಥ ಕಲ್ಲೋಣಿ, ಶಿವಾಜಿ ಮಣಿಮಜಲು, ಮುರಳಿ ತಡಗಜೆ, ಸುದ್ದಿ ಪತ್ರಿಕೆ ವರದಿಗಾರ ಈಶ್ವರ ವಾರಣಾಶಿ,ಶರತ್ ಪೂಗವನ,ಶ್ರೀಮತಿ ಮೈತ್ರಿ ರಾವ್, ಕೇಶವ ನಾಯಕ್, ನಸೀಮಾ ಪಂಜಿಗಾರು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ ಕೆ.ಎನ್.ವಂದಿಸಿದರು.