ಬೆಳ್ಳಾರೆ ಕೆಪಿಎಸ್ ಪ್ರಾಥಮಿಕ ಶಾಲೆಗೆ ನಿರ್ಮಾಣವಾಗುತ್ತಿರುವ ನೂತನ ಕಟ್ಟಡದ ಹಿಂಭಾಗದಲ್ಲಿ ವಿದ್ಯುತ್ ತಂತಿಗಳ ಮೇಲೆ ಕಾಡು ಬಳ್ಳಿಗಳು ಆವರಿಸಿ ಅಪಾಯವನ್ನು ಆಹ್ವಾನಿಸುತ್ತಿದೆ.
ಎಲ್.ಟಿ ಲೈನ್ ಇದಾಗಿದ್ದು, ನಾಲ್ಕು ತಂತಿಗಳೂ ಕಾಡು ಸೊಪ್ಪುಗಳಿಂದ ಆವರಿಸಲ್ಪಟ್ಟಿದೆ.
ಸಮೀಪದಲ್ಲಿಯೇ ಶಾಲೆ ಇರುವುದರಿಂದ ಶಾಲಾ ಮಕ್ಕಳು ಓಡಾಡುವಾಗ ಅಥವಾ ಈ ಭಾಗದ ಮನೆಯವರು ಸಂಚರಿಸುವಾಗ ಗಿಡಗಳನ್ನು ಸ್ಪರ್ಶಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಮೆಸ್ಕಾ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ ಆಗ್ರಹಿಸಿದ್ದಾರೆ.