ರೋಟರಿ ಕ್ಲಬ್ ಸುಳ್ಯ ಇದರ ಪ್ರಾಯೋಜಕತ್ವದಲ್ಲಿ ಮುನ್ನಡೆಸಲ್ಪಡುವ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ(ರಿ.)ಇದರ ಆಡಳಿತಕ್ಕೆ ಒಳಪಟ್ಟ ಪ್ರತಿಷ್ಟಿತ ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆ, ಸುಳ್ಯ ಇಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ ಟಿ. ಅಂಬೆಕಲ್ಲುರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, “ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು”. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ನಳಿನಿ ಡಿ.ರವರು ಸ್ವಾಗತಿಸಿ, ಧನ್ಯವಾದ ಮಾಡಿದರು.
6ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಯ ಪಿ. ಡಿ. ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ಭಾಷಣ ಮಾಡಿದಳು. ಒಂದರಿಂದ ಆರನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಸಭಾಂಗಣಕ್ಕೆ ಕರೆದೋಯ್ದು ವಿವಿಧ ಯೋಗಾಸನಗಳನ್ನು ಮಾಡಿ ಸಲಾಯಿತು. 6ನೇ ತರಗತಿ ವಿದ್ಯಾರ್ಥಿಗಳಾದ ಲಕ್ಷ್ಯ ಪಿ. ಡಿ., ಪ್ರಣೀತಾ, ಸಾನ್ವಿ ಮತ್ತು ಹವೀಶ್(4ನೇ)ಯೋಗದ ಆಸನಗಳನ್ನು ವೇದಿಕೆ ಮೇಲೆ ಸಹಪಾಠಿಗಳಿಗೆ ಮಾಡಿ ತೋರಿಸಿದರು. ಈ ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗೀತಾ ಎನ್. ರವರು ನಡೆಸಿಕೊಟ್ಟರು. ಸಹಶಿಕ್ಷಕಿಯರು ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಿದರು. ಕಲಾ ಶಿಕ್ಷಕ ಪದ್ಮನಾಭ ಕೊಯ್ನಾಡುರವರು ಕಾರ್ಯಕ್ರಮವನ್ನು ಸಂಘಟಿಸಿದರು.