ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ

0

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ಪಟು ಶರತ್ ಕುಮಾರ್ ಎಂ.ಎಸ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗಾಸನದ ಹಲವು ಮಹತ್ವವನ್ನು ತಿಳಿಸಿದರು ಯೋಗಾಭ್ಯಾಸದಲ್ಲಿ ಹಲವು ದಾಖಲೆಗಳನ್ನು ಮಾಡಿದ ಕುಮಾರಿ ಅಕ್ಷಯ ಬಾಬ್ಲುಬೆಟ್ಟು ರವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ .ಕೆ ಇವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿದರು .

ಉಪನ್ಯಾಸಕ ದಾಮೋದರ .ಎನ್. ವಂದನಾರ್ಪಣೆ ಗೈದರು. ಉಪನ್ಯಾಸಕಿ ಶ್ರೀಮತಿ ಸ್ವರ್ಣಕಲಾ ಎ. ಎಸ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಉಪನ್ಯಾಸಕರಾದ ಬಾಲಚಂದ್ರ ರವರು ಕಾರ್ಯಕ್ರಮವನ್ನು ಸಂಘಟಿಸಿದರು ಸಂಸ್ಥೆಯ ಬೋಧಕ, ಬೋಧಕೇತರ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು