ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯ ಇದರ ಸಹಯೋಗದೊಂದಿಗೆ ಅಂಗನವಾಡಿ ಕೇಂದ್ರ ಬೆಳ್ಳಾರೆ ಇದರ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಯೋಗ ತರಬೇತುದಾರರಾದ ಅಖಿಲಾ ಕೆಜೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯೋಗಭ್ಯಾಸ ನಡೆಸಿಕೊಟ್ಟರು, ಸುಳ್ಯ ತಾಲೂಕು ಮಹಿಳೆಯರ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ರಾಜೀವಿ ಆರ್ ರೈ ಪುಡ್ಕಜೆ, ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಹಾಗೂ ಯೋಗ ಶಿಕ್ಷಕಿ ಸರಸ್ವತಿ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಉಷಾ ಪ್ರಸಾದ್ ರೈ ಉಪಸ್ಥಿತರಿದ್ದರು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ದಿವ್ಯಾ ರಮೇಶ್ ಪಡ್ಪು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಭಾರತಿ ಕೆ ವಂದಿಸಿದರು.