ಕೆವಿಜಿ ಐಪಿಎಸ್ ನಲ್ಲಿ ಜೂ. 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಶಾಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಶುಭ ಹಾರೈಸಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್ ಬೆಳಗದ್ದೆ ಮುಖ್ಯ ಅತಿಥಿಯಾಗಿ, ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾಸ್ಕರ್ ರವರು ಮಕ್ಕಳಿಗೆ ಯೋಗದ ಮಹತ್ವವನ್ನು ಸ್ವಸ್ಥ ಜೀವನಕ್ಕೆ ಯೋಗದ ಅವಶ್ಯಕತೆಯನ್ನು ತಿಳಿಸುತ್ತಾ ಯೋಗ ಮಾಡಿ ಆರೋಗ್ಯ ಪಡೆಯಿರಿ ಎಂಬ ಸಲಹೆಯನ್ನು ನೀಡಿದರು. ಸದೃಢ ಆರೋಗ್ಯದಿಂದ ಸದೃಢ ದೇಶವನ್ನು ಕಟ್ಟಲು ಸ್ವಾಸ್ಥ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ ಎಂಬ ಮಾತನ್ನು ಪ್ರಾಂಶುಪಾಲರಾದ ಅರುಣ್ ಕುಮಾರ್ ಪ್ರಸ್ತುತಪಡಿಸಿದರು. ಶಾಲಾ ಯೋಗ ಗುರುಗಳಾದ ಸಂತೋಷ್ ಮುಂಡಕಜೆ, ಪ್ರಶ್ಮಿಜ ಕೆಎಫ್, ದೈಹಿಕ ಶಿಕ್ಷಕರಾದ ಆಶಾಜ್ಯೋತಿ, ತೀರ್ಥವರ್ಣ ಬಳ್ಳಡ್ಕ ಇವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ಹಲವಾರು ಯೋಗ ಭಂಗಿಗಳನ್ನು ಮಾಡಿಸಲಾಯಿತು. ಎಂಟನೇ ತರಗತಿಯ ವಿದ್ಯಾರ್ಥಿನಿ ನಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮಾನ್ವಿ ದಿನದ ಮಹತ್ವವನ್ನು ಪ್ರಸ್ತುತಪಡಿಸಿ, ಪ್ರಫುಲ್ಲ ಸುರೇಶ್ ಯೋಗಾಸನದ ಪ್ರಯೋಜನಗಳನ್ನು ತಿಳಿಸಿದರು. ಲಕ್ಷ್ಮಣ್ ಅಂಬೆಕಲ್ಲು ವಂದಿಸಿದರು.