ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನ ಹಾಗೂ ಪೋಷಕರ ಸಭೆ

0

ದಿ. ಉಪೇಂದ್ರ ಕಾಮತರ ತತ್ವ ಆದರ್ಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆ: ಸುಬ್ರಾಯ ನಂದೋಡಿ

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಸ್ಥಾಪಕರಾಗಿದ್ದ ದಿ. ಉಪೇಂದ್ರ ಕಾಮತ್ ಅವರ ಜನ್ಮದಿನವಾದ ಜೂ. 22ರಂದು ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನ ಹಾಗೂ ಪೋಷಕರ ಸಭೆ ನಡೆಯಿತು.

ಆರಂಭದಲ್ಲಿ ಸಂಸ್ಥೆಯ ಸ್ಥಾಪಕರಾದ ದಿ. ಉಪೇಂದ್ರ ಕಾಮತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ನಿವೃತ್ತ ಅಧ್ಯಾಪಕ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತದ ರಾಷ್ಟ್ರೀಯ ಸ್ವಯಂಸೇವಕ ಸಂಘದ
ಸಹ ಸಂಯೋಜಕ ಸುಬ್ರಾಯ ನಂದೋಡಿ ಅವರು ಮಾತನಾಡಿ ” ಉಪೇಂದ್ರ ಕಾಮತರ ತತ್ವ, ಆದರ್ಶಗಳು ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ತಮ್ಮ ಜೀವನದಲ್ಲಿ ಅಳವಡಿಸಲು” ಕರೆ ನೀಡಿದರು.

ಶಾಲಾ ಶೈಕ್ಷಣಿಕ ಸಲಹೆಗಾರ ನ. ಸೀತಾರಾಮ ಅವರು ದಿ. ಉಪೇಂದ್ರ ಕಾಮತರ ಕುರಿತು ಸ್ಮರಣೆ ಮಾಡಿದರು.
ವೇದಿಕೆಯಲ್ಲಿ ಶ್ರೀಮತಿ ಜಯಲಕ್ಷ್ಮಿ ಸುಬ್ರಾಯ ನಂದೋಡಿ, ಶಾಲಾ ಸಂಚಾಲಕ ಕೆ. ಸುಧಾಕರ ಕಾಮತ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ಯಾಮ್ ಪ್ರಸಾದ್ ಅಡ್ಡoತಡ್ಕ, ಆಡಳಿತಾಧಿಕಾರಿ ಎನ್. ಗೋಪಾಲ್ ರಾವ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಸ್ವಾಗತಿಸಿ, ಸಹಶಿಕ್ಷಕಿಯಾರದ ಶ್ರೀಮತಿ ಮಮತ ಡಿ. ಹಾಗೂ ಶ್ರೀಮತಿ ದಿವ್ಯ ಬಿ. ಕಾರ್ಯಕ್ರಮ ನಿರೂಪಿಸಿದರು.


ಸ್ಥಾಪಕರ ದಿನದ ಅಂಗವಾಗಿ ಸಂಚಾಲಕರಿಂದ ಎಲ್ಲಾ ಮಕ್ಕಳಿಗೆ ಕೊಡೆ ವಿತರಣೆ

ವಿದ್ಯಾ ಸಂಸ್ಥೆಯ ಸ್ಥಾಪಕ ದಿ. ಉಪೇಂದ್ರ ಕಾಮತ್ ಅವರ ಜನ್ಮದಿನವಾದ ಜೂ. 22ರಂದು ಇದೇ ಮೊದಲ ಬಾರಿಗೆ ಸ್ಥಾಪಕರ ದಿನ ಆಯೋಜನೆಗೊಂಡಿದ್ದು ಇನ್ನೂ ಪ್ರತಿ ವರ್ಷ ಇದೇ ದಿನಾಂಕದಂದು ಸ್ಥಾಪಕರ ದಿನ ನಡೆಯಲಿದ್ದು, ಸ್ಥಾಪಕರ ದಿನದ ಅಂಗವಾಗಿ ಶಾಲಾ ಸಂಚಾಲಕ ಹಾಗೂ ದಿ. ಉಪೇಂದ್ರ ಕಾಮತ್ ರವರ ಪುತ್ರ ಶಾಲಾ ಸಂಚಾಲಕರಾದ ಕೆ. ಸುಧಾಕರ ಕಾಮತ್ ಮತ್ತು ಶ್ರೀಮತಿ ಶುಭ ಸುಧಾಕರ ಕಾಮತ್ ದಂಪತಿಗಳು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡೆ ವಿತರಿಸಿದರು.

ವಿದ್ಯಾಸಂಸ್ಥೆಯ ಪೋಷಕ ಪ್ರತಿನಿಧಿಗಳ ಸಭೆ

ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರ ಸಭೆಯು ಇದೇ ಸಂದರ್ಭದಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅಭ್ಯಾಗತರಾಗಿದ್ದ ಸುಬ್ರಾಯ ನಂದೋಡಿಯವರು ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಶಾಲಾ ಸಂಚಾಲಕ ಕೆ. ಸುಧಾಕರ ಕಾಮತ್, ಶೈಕ್ಷಣಿಕ ಸಲಹೆಗಾರ ನ. ಸೀತಾರಾಮ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಆಡಳಿತಾಧಿಕಾರಿ ಎನ್.ಗೋಪಾಲ್ ರಾವ್, ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಹೇಮಂತ್ ಕಾಮತ್, ಶ್ರೀಮತಿ ಲತಾ ಮಧುಸೂಧನ್, ಪುರುಷೋತ್ತಮ ಕಿರ್ಲಾಯ, ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ್ ಮಠ ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ಶಿಶು ಮಂದಿರದ ಮಾತಾಜಿ ಶ್ರೀಮತಿ ಬೇಬಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.


ಸಹಶಿಕ್ಷಕಿಯರಿಗೆ ಬೀಳ್ಕೊಡುಗೆ


ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ವಿವಿಧ ಕಾರಣಗಳಿಗೆ ಸಂಸ್ಥೆಯಿಂದ ನಿರ್ಗಮಿಸಿ ತೆರಳಲಿರುವ ಪ್ರೌಢಶಾಲಾ ಶಿಕ್ಷಕಿಯರಾದ ಶ್ರೀಮತಿ ಕವಿತಾ ಕುದ್ಕುಳಿ, ಶ್ರೀಮತಿ ಅನನ್ಯ ಜಟ್ಟಿಪಳ್ಳ, ಪ್ರಾಥಮಿಕ ಶಾಲಾ ಶಿಕ್ಷಕರಾದ ಕು. ಹವಿನಾಕ್ಷಿ ಕಲ್ಮಡ್ಕ, ಕಂಪ್ಯೂಟರ್ ವಿಭಾಗದ ಶ್ರೀಮತಿ ಕಿರಣ ದೊಡ್ಡೇರಿ, ಕು. ಅಶ್ವಿತಾ ದೊಡ್ಡೇರಿಯವರನ್ನು ಗೌರವಿಸಿ ಬೀಳ್ಕೊಡಲಾಯಿತು.