ಹರ್ಲಡ್ಕ ವಿಲ್ಲಾ ವಾರ್ಷಿಕೋತ್ಸವ ಮತ್ತು ಅನುಸ್ಮರಣೆ

0

ಸಮಾಜಸೇವೆಗೆ ಹರ್ಲಡ್ಕ ಮಾದರಿ:ಜಮಲುಲೈಲಿ ತಂಙಳ್


ಸುಳ್ಯ ಜಟ್ಟಿಪಳ್ಳ ರಸ್ತೆ ಕಳೆದ ವರ್ಷ ಉದ್ಘಾಟನೆಗೊಂಡ ಹರ್ಲಡ್ಕ ವಿಲ್ಲಾ ಇದರ ವಾರ್ಷಿಕ ಕಾರ್ಯಕ್ರಮ ಹಾಗೂ ಮರ್ಹೂಮ್ ಹಾಜಿರಾ,ಮರ್ಹೂಮ್ ಅಬ್ದುಲ್ಲಾ ಹರ್ಲಡ್ಕ, ಹಾಗೂ ಮರ್ಹೂಮ್ ಯೂಸುಫ್ ಪಾಣಾಜೆ ಯವರ ಅನುಸ್ಮರಣೆ ಹಾಗೂ ತಹಲೀಲ್ ಕಾರ್ಯಕ್ರಮ ಹರ್ಲಡ್ಕ ವಿಲ್ಲಾ ಸಭಾಂಗಣದಲ್ಲಿ ಜೂ.23 ರಂದು ನಡೆಯಿತು.

ಕಾರ್ಯಕ್ರಮ ವನ್ನು ಅಸ್ಸಯ್ಯಿದ್ ಕೆ ಎಸ್ ಝೈನುಲ್ ಆಬಿದೀನ್ ಜಮಲುಲೈಲಿ ತಂಙಳ್ ಕಾಜೂರು ತಂಙಳ್ ಉದ್ಘಾಟಿಸಿ ಮಾತನಾಡಿ ಅಬ್ದುಲ್‌ ಲತೀಫ್ ಹರ್ಲಡ್ಕ ರವರು ಹರ್ಲಡ್ಕ ವಿಲ್ಲಾದ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಸಾವಿರಾರು ಮುತ್ತಹಲ್ಲಿಂ ವಿದ್ಯಾರ್ಥಿಗಳ ಸಂಗಮಮಾಡಿ ಮನೆಯ ಗೃಹ ಪ್ರವೇಶ ಮಾಡಿದ್ದರು
ತನ್ಮ ತಾಯಿ ಮರ್ಹೂಮ್ ಹಾಜಿರ ಅವರ ಸ್ಮರಣಾರ್ಥ ಅನೇಕ ಅನಾಥ ಮತ್ತು ನಿರ್ಗತಿಕರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ.ಬಡ ಹೆಣ್ಣು ಮಕ್ಕಳ ವಿವಾಹ ,ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮಾಡುವುದರೊಂದಿಗೆ ಹಲವಾರು ಸಮಾಜಮುಖಿ ಕೆಲಸ ಮಾಡಿ ಸಮಾಜಸೇವೆ ಮಾದರಿಯಾಗಿದ್ದಾರೆ ಎಂದವರು ಹೇಳಿದರು


ಅಸ್ಸಯ್ಯಿದ್ ಮುಹ್ಸಿನ್ ಸೈದಲವಿ ಕೋಯ ತಂಙಳ್ ಕಲ್ಲೇರಿ,
ಅಸ್ಸಯ್ಯಿದ್ ಕುಂಞಕೋಯ ತಂಙಳ್ ಸಅದಿ ಸುಳ್ಯ,
ಅಸ್ಸಯ್ಯಿದ್ ಉಮರ್ ಜಿಫ್ರೀ ಹನೀಫೀ ತಂಙಳ್ ಕುಂಭಕ್ಕೊಡ್,
ಅಸ್ಸಯ್ಯಿದ್ ತ್ವಾಹಿರ್ ತಂಙಳ್ ಸಅದಿ ಸುಳ್ಯ,
ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಜಯನಗರ,
ಅಶ್ರಫ್ ಕಾಮಿಲ್ ಸಖಾಫಿ ಗಾಂಧಿನಗರ ಸುಳ್ಯ,
ತೌಸೀಫ್ ಸಅದಿ ಹರೇಕಳ,
ಅನಸ್ ಅಝ್ಅರಿ ಎಲಿಮಲೆ,
ಹಾಫಿಳ್ ಶೌಕತ್ಅಲಿ ಸಖಾಫಿ ಮೊಗರ್ಪಣೆ,
ಉಮರ್ ಮುಸ್ಲಿಯಾರ್ ಮರ್ದಾಳ
ಖಲೀಲ್ ಹಿಮಮಿ ಸಖಾಫಿ ಬೆಳ್ಳಾರೆ,ರಿಝ್ವಿ ಅಂಬಟೆಡ್ಕ,ಅಬೂಭಕ್ಕರ್ ಹಿಮಮಿ‌ ಸಖಾಫಿ ಅನ್ಸಾರಿಯ, ಸಯ್ಯದ್ ಹುಸೈನ್ ಸಹದಿ ತಂಙಳ್, ನೌಶದ್ ಮದನಿ,ಹಮೀದ್ ಸಖಾಫಿ , ಅಡ್ವಕೇಟ್ ಅಬ್ದುಲ್ಲಾ ಹಿಮಮಿ ಸಖಾಫಿ,ಹಂಝತ್ತುಲ್ ಕರಾರ್ ಮುಹಿನಿ ಸಖಾಫಿ,ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್, ಮಾಜಿ ಅಧ್ಯಕ್ಷರಾದ ಹಾಜಿ ಕೆ ಎಂ ಮುಸ್ತಫಾ, ಆದಂ ಹಾಜಿ ಕಮ್ಮಾಡಿ,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸಂಚಾಲ ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇರ್ಷಾದ್ ಹರ್ಲಡ್ಕ, ಬಶೀರ್ ,ಹಮೀದ್ ಹೊಸ್ಮಠ,ಉವೈಸ್ ಅನ್ಸಾರಿಯ ಕಾರ್ಯಕ್ರಮ ನಿರೂಪಿಸಿದರು.
ಲತೀಫ್ ಹರ್ಲಡ್ಕ ಸರ್ವರನ್ನೂ ಸ್ವಾಗತಿಸಿದರು