ಕಾಞಂಗಾಡ್ ಪಾಣತ್ತೂರು ಸುಳ್ಯ ಅಂತಾರಾಜ್ಯ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆಗಳನ್ನು ಪುನರಾರಂಭಿಸುವಂತೆ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಮನವಿ ಮಾಡಿದ್ದಾರೆ.
ಕೆಎಸ್ ಆರ್ ಟಿ ಸಿ ಕಾಂಞಂಗಾಡ್ ಡಿಪೋದಿಂದ ಕಾಂಞಂಗಾಡ್ ಪಾಣತ್ತೂರು ಸುಳ್ಯ ಅಂತರಾಜ್ಯ ಮಾರ್ಗದಲ್ಲಿ 5 ಬಸ್ ಪರ್ಮಿಟ್ ಗಳಿದ್ದು, ಐದು ಸರ್ವಿಸ್ ಗಳು ಇದ್ದವು. ಈ ಐದು ಬಸ್‌ಗಳು ಕೋವಿಡ್‌ಗೆ ಮೊದಲು ಉತ್ತಮ ಲಾಭದಲ್ಲಿ ಓಡುತ್ತಿದ್ದವು, ಆದರೆ ಕೋವಿಡ್ ನಂತರ ಅವುಗಳನ್ನು 2 ಸರ್ವಿಸಿಗಳಾಗಿ ಇಳಿಸಲಾಯಿತು, ಇದು ವಿದ್ಯಾರ್ಥಿಗಳಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಸಾಕಷ್ಟು ತೊಂದರೆ ಉಂಟುಮಾಡಿತು. ಸುಳ್ಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿಂದ ಈಗಿರುವ 5 ಬಸ್ ಸಂಚಾರವನ್ನು ಪುನರಾರಂಭಿಸಬೇಕು. ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗುವುದರಿಂದ ರೈತರು ಸುಳ್ಯ ಪೇಟೆಯನ್ನೇ ಅವಲಂಬಿಸಿದ್ದಾರೆ. ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ, ವೈದ್ಯಕೀಯ ಕಾಲೇಜು, ಆಯುರ್ವೇದ ಕಾಲೇಜು, ಎಂಜಿನಿಯರಿಂಗ್ ಮತ್ತು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸುಳ್ಯ ಕರ್ನಾಟಕ ಭಾಗವನ್ನು ಅವಲಂಬಿಸಿದ್ದಾರೆ. ಪುಣ್ಯಕ್ಷೇತ್ರಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಲ್ಲೂರು ಮುಂತಾದ ಯಾತ್ರಾ ಸ್ಥಳ ಗಳನ್ನು ಸುಲಭವಾಗಿ ತಲುಪುವ ಮಾರ್ಗವಾಗಿದೆ. ಸುಳ್ಯದಿಂದ ಮಡಿಕೇರಿ, ಮೈಸೂರು, ಬೆಂಗಳೂರು ಮುಂತಾದ ಕಡೆ ಬಸ್ಸುಗಳ ಸರ್ವಿಸ್ಗಳಿದ್ದು ಉತ್ತಮ ಸಂಚಾರ ಮಾರ್ಗವಾಗಿ ಜನರಿಗೆ ಉಪಯೋಗವಾಗುತ್ತದೆ.
ಪನತ್ತಡಿ, ಕಲ್ಲಾರ್, ಪಂಚಾಯತ್ ಗಳು ಎಂಡೋಸಲ್ಫಾನ್ ಪೀಡಿತ ಪ್ರದೇಶವಾಗಿದ್ದು, ಈ ಪಂಚಾಯತ್ ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಗೆ ಸೇರಿದೆ. ಗಿರಿಜನರು ಹೆಚ್ಚಾಗಿರುವ ಪನತ್ತಡಿ ಪಂಚಾಯತ್ ವ್ಯಾಪ್ತಿಯ ಪಾಡಿಕೊಚ್ಚಿ, ಕಮ್ಮಾಡಿ, ರಂಗತ್ತಮಲೆ ಪ್ರದೇಶಗಳನ್ನು ಒಳಗೊಂಡ ಕಲ್ಲಪಳ್ಳಿಯ ಗ್ರಾಮೀಣ ಪ್ರದೇಶದ ಜನತೆಗೆ ಪಾಣತ್ತೂರು, ಕಾಞಂಗಾಡು, ಪರಪ್ಪ, ಕಾಸರಗೋಡಿಗೆ ತೆರಳಲು ಈ ಬಸ್ ಗಳು ಕೂಡಲೇ ಸಂಚಾರ ಆರಂಭಿಸಬೇಕು ಅಲ್ಲದೇ ಸರ್ಕಾರದ ನೀತಿಯಂತೆ ಎಸ್‌ಸಿ ಮತ್ತು ಎಸ್‌ಟಿ ಪ್ರದೇಶದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ, ಹಾದುಹೋಗುವ ಬಸ್ ಸೇವೆಗಳನ್ನು ನಿಲ್ಲಿಸಬಾರದು, ಎಂಬ ಸರಕಾರದ ಆದೇಶವು ಇದೆ, ಆದರೆ ಈ ಸರ್ವಿಸ್ ಗಳನ್ನು ಎರಡಕ್ಕೆ ಇಳಿಸಲಾಗಿದೆ, ಈ ಎಲ್ಲಾ ಪರಿಗಣನೆ ಕೊಟ್ಟು 5 ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯನ್ನು ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.ಎಂದು ಅರುಣ್ ರಂಗತ್ತಮಲೆ ಮನವಿ ಮಾಡಿದ್ದಾರೆ.