ದೇವ ಕಾಲೋನಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ದೇವಚಳ್ಳ ಗ್ರಾಮದ ದೇವ ಕಾಲೋನಿ ಕಾಂಕ್ರೀಟ್ ರಸ್ತೆಯನ್ನು ಗುತ್ತಿಗಾರು ಸೊಸೈಟಿ ಉಪಾಧ್ಯಕ್ಷ ಕಿಶೋರ್ ಅಂಬೆಕಲ್ಲು ಮತ್ತು ಸಂಜೀವಿನಿ ಒಕ್ಕೂಟ ದ ತಾರಾ ರವೀಂದ್ರ ಅಡ್ಡನಪಾರೆ ರಿಬ್ಬನ್ ತುಂಡರಿಸುವುದರ ಮೂಲಕ ಉದ್ಘಾಟಿಸಿದರು.

ಕಾಲೋನಿ ಹಿರಿಯರಾದ ಬಾಬು ದೇವ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ರಾಮಚಂದ್ರ ದೇವ, ಕುಸುಮಾದರ ದೇವ ಹಾಗೂ ರಸ್ತೆ ಫಾಲಾನುಭವಿಗಳು ಉಪಸ್ಥಿತರಿದ್ದರು.