ಕೆದಿಲ: ಅಶಕ್ತರಿಗೆ ಮನೆ ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮೆರೆದ ಶೌರ್ಯ ವಿಪತ್ತು ನಿರ್ವಹಣಾ ಘಟಕ

0

ಮುಪ್ಪೇರ್ಯ ಗ್ರಾಮದ ಕೆದಿಲ ನಿವಾಸಿ ದಿ. ರಾಮಣ್ಣ ನಾಯ್ಕರ ಪತ್ನಿ ಶ್ರೀಮತಿ ಗಂಗಮ್ಮ ಎಂಬವರ ಮನೆಯ ಮಾಡು ಸಂಪೂರ್ಣ ಶಿಥಿಲಗೊಂಡು ಮಳೆನೀರು‌ ಮನೆಯ ಒಳಗೆ ಬೀಳುತ್ತಿದ್ದನ್ನು ಗಮನಿಸಿ ಸ್ಥಳೀಯ ಬಾಳಿಲ ಗ್ರಾ.ಪಂ.‌ ಸದಸ್ಯ ಹರ್ಷ ಜೋಗಿಬೆಟ್ಟುರವರ ಸಲಹೆಯಂತೆ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯವರು ಶ್ರಮದಾನದ ಮೂಲಕ ಮನೆಯ ಮಾಡು ದುರಸ್ತಿ ಮಾಡಿ ಮಾನವೀಯತೆ ಮೆರೆದ ಘಟನೆ ಜೂ. 23ರಂದು ನಡೆದಿದೆ.


ಶ್ರೀಮತಿ ಗಂಗಮ್ಮನವರು ಓರ್ವ ಅಂಗವಿಕ ಪುತ್ರಿಯೊಂದಿಗೆ ಕೆದಿಲದಲ್ಲಿ ವಾಸವಾಗಿದ್ದು, ತಾವೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದೆಎಡು ವರ್ಷಗಳಿಂದ ಇವರ ಮನೆಯ ಮಾಡು ಅಲ್ಲಿಲ್ಲಿ ಸೋರುತ್ತಿದ್ದು, ವಾಸವಾಗಲು ಅಯೋಗ್ಯವಾಗಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಇವರಿಗೆ ಮನೆಯನ್ನು ದುರಸ್ತಿ ಮಾಡಲು ಸಾಧ್ಯವಾಗಲಿಲ್ಲ. ಆಗ ಹರ್ಷರವರೇ ಮುಂದೆ ಬಂದು ಶೀಟ್ ಹಾಕಿ ತಾತ್ಕಾಲಿಕ ಪರಿಹಾರ ಮಾಡಿದ್ದರು. ಈ ವರ್ಷ ಮಳೆಗಾಲದಲ್ಲಿ ಮಾಡು ಸಂಪೂರ್ಣ ಕೆಟ್ಟು ಹೋಗಿ ಮಳೆ ನೀರು ಮನೆಯ ಒಳಗೆ ಬಿದ್ದು, ವಾಸ ಮಾಡಲು ಕಷ್ಟವಾಗುತ್ತಿತ್ತು. ಇದನ್ನು ಅರಿತ ಹರ್ಷ ಜೋಗಿಬೆಟ್ಟುರವರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪದಾಧಿಕಾರಿಗಳನ್ನು ಭೇಟಿ ಮಾಡಿ ಸಹಾಯ ಮಾಡುವಂತೆ ವಿನಂತಿಸಿಕೊಂಡ ಮೇರೆಗೆ ಪಂಚಾಯತ್ ನಿಂದ ಅಧ್ಯಕ್ಷೆ ಪವನ ಜೋಗಿಬೆಟ್ಟು ಮತ್ತು ಇತರ ಸದಸ್ಯರು, ಅಧಿಕಾರಿಗಳ ಸಹಕಾರದಿಂದ ರೂ. 27 ಸಾವಿರ ಅನುದಾನವನ್ನು ಒದಗಿಸಿದರೆ ಸುಮಾರು 75ಹಣವನ್ನು ಹರ್ಷ ಜೋಗಿಬೆಟ್ಟುರವರೇ ಹಾಕಿ ಅಂದಾಜು 1 ಲಕ್ಷ ವೆಚ್ಚದಲ್ಲಿ ಹೊಸ ಮಾಡು ನಿರ್ಮಿಸಿಕೊಟ್ಟಿದ್ದಾರೆ. ಶೌರ್ಯ ವಿಪತ್ತು ನಿರ್ವಹಣಾ ಘಟಕದ ನಿಂತಿಕಲ್ಲು ಇದರ ಸದಸ್ಯರಾದ ದಿನೇಶ್, ನಾರಾಯಣ, ತೇಗಪ್ಪ, ರಮೇಶ್ ಕುರಿಯ, ಆನಂದ, ಅಂಗಾರ, ಬೆಳ್ಳಾರೆ ಘಟಕದ ಶೇಷಪ್ಪ ನಾಯ್ಕ್ ಮಠತ್ತಡ್ಕ, ಸುಂದರ ನಾಯ್ಕ್ ಮಠತ್ತಡ್ಕ, ರಮೇಶ್ ನಾಯ್ಕ್ ಮಠತ್ತಡ್ಕ ಶ್ರಮದಾನದ ಮೂಲಕ ಮನೆಯ ಮಾಡು ನಿರ್ಮಾಣ ಮಾಡಿದರು. ಮುಪ್ಪೇರ್ಯ ವಾರ್ಡ್ ಸದಸ್ಯ ಹರ್ಷ ಜೋಗಿಬೆಟ್ಟು, ಬೆಳ್ಳಾರೆ ಘಟಕದ ಮೇಲ್ವಿಚಾರಕಿ ವಿಶಾಲಾಕ್ಷಿ ಸಹಕರಿಸಿದರು. ಬಡಗಿ ಕೆಲಸವನ್ನು ಶಿವಪ್ಪ ಆಚಾರ್ಯ ಮತ್ತು ಸಂದೀಪ್ ನೆರವೇರಿಸಿದರು.