ಏಣಾವರ ತಿರುವಿನಲ್ಲಿ ವಿದ್ಯುತ್ ಲೈನ್ ಮೇಲೆ ಬಿದ್ದ ಮರ -ಅಪಾಯದಿಂದ ಪಾರಾದ ಬೈಕ್ ಸವಾರ

0

ನಾರ್ಕೋಡು ಕೋಲ್ಚಾರು ರಸ್ತೆಯ ಏಣಾವರ ತಿರುವಿನಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ರಸ್ತೆಯ ಮೇಲೆ ವಿದ್ಯುತ್ ತಂತಿಯು ತುಂಡಾಗಿ ಬಿದ್ದಿತ್ತು.

ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ರಸ್ತೆಯ ಮೇಲಿದ್ದ ತಂತಿಯು ಗಮನಕ್ಕೆ ಬಾರದೆ ಇದ್ದುದರಿಂದ ಬೈಕಿನ ಚಕ್ರಕ್ಕೆ ತಂತಿಯು ಸಿಲುಕಿದ್ದರಿಂದ ಸವಾರರು ರಸ್ತೆಯ ಮೇಲೆ ಬಿದ್ದರು. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಲೈನಿನಲ್ಲಿ ವಿದ್ಯುತ್ ಪ್ರವಹಿಸದೆ ಇದ್ದುದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.